ದೇವರನ್ನೂ ಬಿಡದ AI ತಂತ್ರಜ್ಞಾನ; ದೇವಾಲಯದಲ್ಲಿದೆ ಭಕ್ತರೊಡನೆ ಮಾತನಾಡುವ ದೇವರು!

Share the Article

Malaysia:ಮನುಷ್ಯರು ದಿನದಿಂದ ದಿನಕ್ಕೆ ನಮ್ಮ ಜಾಗವನ್ನು AI ತಂತ್ರಜ್ಞಾನ ಅಕ್ರಮಿಸಿಕೊಳ್ಳುತ್ತಿದೆ ಎಂದು ಬೇಸರಿಸಿಕೊಳ್ಳುತ್ತಿರುವ ಮತ್ತು ಬಾಧೆ ಪಡುತ್ತಿರುವ ಸನ್ನಿವೇಶ ದಿನನಿತ್ಯ ಕಾಣುತ್ತಿದ್ದೇವೆ. ಆದರೆ ಈಗ ನಾವು ಒಂದಿಷ್ಟು ರಿಲಾಕ್ಸ್ ಆಗಿಬಿಡಬಹುದು. ಕಾರಣ, ನಮ್ಮನ್ನೇನು, ದೇವರನ್ನೇ AI ಟೆಕ್ನಾಲಜಿ ಬಿಟ್ಟಿಲ್ಲ; ನಾನೇನು ಮಹಾ ಅಂತ ನಮಗೆ ನಾವೇ ಸುಳ್ಳೇ ಸಮಾಧಾನ ಮಾಡಿಕೊಳ್ಳುವ ಸಮಯ ಬಂದಿದೆ. ದೇವರ ಜಾಗದಲ್ಲಿ AI ದೇವರು ಬಂದು ಕೂತದ್ದಲ್ಲದೆ, ಭಕ್ತರ ಜತೆ ಮಾತಾಡಲು ಕೂಡಾ ಅದು ಶುರುಮಾಡಿದೆ.

ಮಲೇಷ್ಯಾದ ಟಾವೊದ ದೇವಾಲಯವೊಂದು ಅಚ್ಚರಿಯ ಧಾರ್ಮಿಕ ಆವಿಷ್ಕಾರಕ್ಕೆ ಸಾಕ್ಷಿಯಾಗಿದೆ. ವಿಶ್ವದ ಮೊದಲ AI ಚಾಲಿತ ದೇವತೆ ಎಂಬ ಖ್ಯಾತಿ ಇರುವ AI ಪ್ರತಿಮೆಯನ್ನು ಅದು ಜಗತ್ತಿಗೆ ಪರಿಚಯಿಸಿದೆ.

ಈ ಮಜು ಎಂಬ AI ದೇವರು ಮಲೇಷ್ಯಾದ ಜೋಹೋರ್‌ನಲ್ಲಿರುವ ಟಿಯಾನ್‌ಹೌ ದೇವಸ್ಥಾನದಲ್ಲಿದೆ. ಇಲ್ಲಿನ ಜನ ತಮ್ಮ ಸಂಪ್ರದಾಯವನ್ನು ತಂತ್ರಜ್ಞಾನದೊಂದಿಗೆ ಮಿಕ್ಸ್ ಮಾಡಿದ್ದಾರೆ. ಇಲ್ಲಿ ಭಕ್ತರು ದೇವರೊಂದಿಂಗೆ ಮಾತನಾಡಬಹುದು ಮತ್ತು ತಮ್ಮ ಕಷ್ಟಗಳನ್ನು ಹೇಳಿಕೊಳ್ಳಬಹುದು. ಭಕ್ತರ ಪ್ರಶ್ನೆಗೆ AI ಮಜು ಸೌಮ್ಯವಾದ ಧ್ವನಿಯಲ್ಲಿ, ಆಧ್ಯಾತ್ಮಿಕ ಬುದ್ಧಿವಂತಿಕೆಯಿಂದ ನಾಜೂಕಾದ ಉತ್ತರ ನೀಡುತ್ತದೆ. ಭಕ್ತರ ಉದ್ವೇಗಗೊಂಡ ಮನಸ್ಸು ತಣ್ಣಗಾಗುವಂತೆ ಪ್ರಶಾಂತವಾಗುವಂತೆ ಈ ದೇವರು ಸಾಂತ್ವನ ಹೇಳುತ್ತಾರೆ.

ಇನ್ನು AI ದೇವರ ಆವೃತ್ತಿಯನ್ನು ಮಲೇಷಿಯಾದ ತಂತ್ರಜ್ಞಾನ ಕಂಪನಿ ಐಮಾಜಿನ್ ಅಭಿವೃದ್ಧಿಪಡಿಸಿದೆ. ಈ ಬಗ್ಗೆ ವೀಡಿಯೊ ರೆಕಾರ್ಡ್ ಮಾಡಿದ್ದು ಐಮಾಜಿನ್ ಸಂಸ್ಥಾಪಕ ಶಿನ್ ಕಾಂಗ್ ವರ್ಚುವಲ್‌ ದೇವರಿಗೆ ಒಂದು ಪ್ರಶ್ನೆಯನ್ನು ಕೇಳಿದ್ದಾರೆ. ಮ್ಯಾಂಡರಿನ್‌ಲ್ಲಿ ಪಿಯಾನ್ ಕೈ ಯುನ್ ಎಂದು ಕರೆಯಲ್ಪಡುವ ಅನಿರೀಕ್ಷಿತ ಅದೃಷ್ಟವನ್ನು ನಾನು ಹೊಂದಬಹುದೇ? ಎಂದು ಕೇಳಿದಾಗ AI ದೇವರು ಶಾಂತವಾಗಿ ಪ್ರತಿಕ್ರಿಯಿಸಿದೆ. ನೀವು ಮನೆಯಲ್ಲಿಯೇ ಇದ್ದರೆ ಅನಿರೀಕ್ಷಿತವಾಗಿ ಅದೃಷ್ಟವೇ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದು ಹೇಳಿ ಅಚ್ಚರಿ ಮೂಡಿಸಿದೆ. ಒಟ್ಟಾರೆ AI ತಂತ್ರಜ್ಞಾನ ಜನರ ಆಚರಣೆ ವಿಚಾರ ಜೊತೆಗೆ ನಂಬಿಕೆಗಳಲ್ಲಿ ಕೂಡ ಹಸ್ತಕ್ಷೇಪ ಮಾಡಿದೆ. ದೇವರೇ ದೇವರನ್ನು, ಜತೆಗೆ ನಮ್ಮನ್ನು ಕೂಡಾ ಕಾಪಾಡಬೇಕು.

Comments are closed.