Kadaba: ಕಡಬ : ಮನೆಯೊಂದರ ಫ್ರಿಡ್ಜ್ ನಲ್ಲಿ ಅಕ್ರಮ ಕಾಡು ಪ್ರಾಣಿಯ ಮಾಂಸ ಪತ್ತೆ!

Share the Article

Kadaba: ಮನೆಯೊಂದರಲ್ಲಿ ಅಕ್ರಮವಾಗಿ ಕಾಡು ಪ್ರಾಣಿಯ ಮಾಂಸವನ್ನು ಸಂಗ್ರಹಿಸಿರುವ ಕುರಿತು ದೊರೆತ ಖಚಿತ ಮಾಹಿತಿಯ ಮೇರೆಗೆ ಪಂಜ ವಲಯ ತಂಡ ಅರಣ್ಯ ಅಧಿಕಾರಿಗಳ ದಾಳಿ ನಡೆಸಿದ್ದು ಮನೆಯ ಫ್ರಿಡ್ಜ್ ನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಕಾಡು ಪ್ರಾಣಿಯ ಮಾಂಸ ಪತ್ತೆ ಹಚ್ಚಿದ್ದಾರೆ.

ಕಡಬದ ನೂಜಿಬಾಳ್ತಿಲ ಎಂಬಲ್ಲಿ ಘಟನೆ ನಡೆದಿದ್ದು ನೂಜಿಬಾಳ್ತಿಲ ಗ್ರಾಮದ ಪಟ್ಟಣ ತೇಗಿಲ್ ಕಳಜಾಲು ನಿವಾಸಿ ವರ್ಗಿಸ್ ತೋಮಸ್ ಎಂಬವರಿಗೆ ಸೇರಿದ ಮನೆಯಲ್ಲಿ ಸುಮಾರು 10 ಕೆಜಿ ಕಾಡುಪ್ರಾಣಿ ಮಾಂಸ ಪತ್ತೆ ಹಚ್ಚಿದ್ದಾರೆ.

ಆರೋಪಿ ಪರಾರಿಯಾಗಿದ್ದು ಕಾಡುಪ್ರಾಣಿ ಮಾಂಸ ಹಾಗೂ ಬಂದೂಕು ವಶಕ್ಕೆ ಪಡೆದಿದ್ದಾರೆ.

Comments are closed.