Nitin Ghadkari: ಇನ್ನು ವಾಹನಗಳಿಗೆ ಕೊಳಲು, ತಬಲಾ ಸೇರಿ ಸಂಗೀತ ವಾದ್ಯಗಳ ಹಾರ್ನ್- ನಿತಿನ್ ಗಡ್ಕರಿ

Nitin Gadkari: ಭಾರತದಲ್ಲಿ ವಾಹನಗಳ ಹಾರ್ನ್ ಆಗಿ ಭಾರತೀಯ ಸಂಗೀತ ವಾದ್ಯಗಳ ಶಬ್ದವನ್ನು ಮಾತ್ರ ಬಳಕೆ ಮಾಡಲು ಅನುವಾಗುವಂತೆ ಕಾನೂನು ಜಾರಿಗೆ ಚಿಂತನೆ ನಡೆಸಲಾಗಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸೋಮವಾರ ಈ ಕುರಿತು ಮಾಹಿತಿ ನೀಡಿದ್ದು, ಕೊಳಲು, ತಬಲಾ, ವಯೋಲಿನ್, ಹಾರ್ಮೋನಿಯಂ ಮೊದಲಾದ ವಾದ್ಯಗಳ ಶಬ್ದವು ಕಿವಿಗೆ ಸುಶ್ರಾವ್ಯವಾಗಿದ್ದು, ಎಲ್ಲಾ ವಾಹನಗಳಿಗೆ ಇದನ್ನು ಕಡ್ಡಾಯ ಮಾಡುವ ಕುರಿತು ಯೋಚಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಹೀಗಾಗಿ ತಬಲಾ, ಪಿಟೀಲು, ಕೊಳಲು, ಹಾರ್ಮೋನಿಯಂ ಸೇರಿ ಕೇಳಲು ಹಿತವೆನಿಸುವ ಭಾರತೀಯ ಸಂಗೀತ ವಾದ್ಯಗಳ ಶಬ್ದಗಳನ್ನು ಹಾರ್ನ್ ಆಗಿ ಎಲ್ಲಾ ವಾಹನಗಳಲ್ಲಿ ಬಳಸುವ ಕಾನೂನು ರೂಪಿಸಲಾಗುವುದು ಎಂದು ಹೇಳಿದ್ದಾರೆ.
Comments are closed.