Karnataka Caste Census: ಮುಸ್ಲಿಮರ ಜನಸಂಖ್ಯೆ 30 ವರ್ಷಗಳಲ್ಲಿ ಶೇ.90ರಷ್ಟು ಏರಿಕೆ; ಜಾತಿಗಣತಿ ವರದಿ

Karnataka Caste Census: ಜಾತಿಗಣತಿಯ 2015 ರ ಸಮೀಕ್ಷೆಯಲ್ಲಿ ಜನಸಂಖ್ಯೆ ಲೆಕ್ಕಾಚಾರ ಬಯಲಾಗಿದೆ. ಇದೀಗ ಯಾವ್ಯಾವ ಸಮುದಾಯ ಎಷ್ಟೆಷ್ಟು ಹೆಚ್ಚಾಗಿದೆ ಎನ್ನುವ ಸಂಗತಿ ಕೂಡಾ ಬಯಲಾಗಿರುವ ಕುರಿತು ಟಿವಿ9 ವರದಿ ಮಾಡಿದೆ.
30ವರ್ಷಗಳಲ್ಲಿ ಮುಸ್ಲಿಮರ ಜನಸಂಖ್ಯೆ ಶೇ.90 ರಷ್ಟು ಏರಿಕೆಯಾಗಿರುವ ಅಂಶ ಸೋರಿಕೆಯಾಗಿದೆ.
1984 ರಲ್ಲಿ ವೆಂಕಟಸ್ವಾಮಿ ಆಯೋಗ ನಡೆಸಿದ್ದ ಸಮೀಕ್ಷೆ ಪ್ರಕಾರ 61 ಲಕ್ಷ ಜನರಿದ್ದ ವೀರಶೈವ ಲಿಂಗಾಯತರು ನಂ.1 ಸ್ಥಾನದಲ್ಲಿದ್ದರು. ನಂತರ 2015 ರ ಕಾಂತರಾಜು ಆಯೋಗದ ಸಮೀಕ್ಷೆ ಪ್ರಕಾರ ವೀರಶೈವ ಲಿಂಗಾಯತರು ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. 57 ಲಕ್ಷ ವಿದ್ದ ಎಸ್‌ಸಿ ಸಮುದಾಯ 30 ವರ್ಷದಲ್ಲಿ 1 ಕೋಟಿಯಾಗಿದ್ದು ಬರೋಬ್ಬರಿ 90 ರಷ್ಟು ಜನಸಂಖ್ಯೆ ಹೆಚ್ಚಳವಾಗಿದೆ. ಮುಸ್ಲಿಮರು ಕೂಡಾ 1984 ರಲ್ಲಿ ಕರ್ನಾಟಕದಲ್ಲಿ ಕೇವಲ 39 ಲಕ್ಷ ಜನರಿದ್ದರು. ಆದರೆ ಕಾಂತರಾಜು ಆಯೋಗದ ವರದಿಯ ಅನುಸಾರ 76 ಲಕ್ಷವಾಗಿದೆ. ಅಂದರೆ ಬರೋಬ್ಬರಿ ಶೇ.94 ರಷ್ಟು ಏರಿಕೆಯಾಗಿದೆ ಎಂದು ಟಿವಿ9 ಮಾಧ್ಯಮ ವರದಿ ಮಾಡಿದೆ.
ಮುಸ್ಲಿಮರ ಸಂಖ್ಯೆ ಅಷ್ಟೊಂದು ಹೆಚ್ಚಳ ಆಗಿರುವುದನ್ನು ಪ್ರಶ್ನೆ ಮಾಡುತ್ತಿರುವ ಬಿಜೆಪಿ, ಜಾತಿ ಗಣತಿಯ ಮೂಲ ಪ್ರತಿ ಸಿಎಂ ಮನೆಯಲ್ಲಿದೆ. ಇದು ನಕಲಿ ವರದಿ ಎಂದು ಹೇಳಿದೆ.
Comments are closed.