JEE Main 2025 Result: JEE Main 2025ರ ಫಲಿತಾಂಶ ಪ್ರಕಟ!

Share the Article

JEE Main 2025 Result: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಶುಕ್ರವಾರ ಜೆಇಇ ಮುಖ್ಯ ಪರೀಕ್ಷೆ 2025 ಫಲಿತಾಂಶ ಬಿಡುಗಡೆ ಮಾಡಿದೆ. ಜನವರಿ ಮತ್ತು ಎಪ್ರಿಲ್‌ನಲ್ಲಿ ಎರಡು ಅವಧಿಗಳಲ್ಲಿ ಈ ಪರೀಕ್ಷೆ ನಡೆದಿತ್ತು.

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು ಅಧಿಕೃತ ವೆಬ್‌ಸೈಟ್‌ನಲ್ಲಿ ಎಪ್ರಿಲ್‌ ಅಧಿವೇಶನದ ಅಂತಿಮ ಕೀ ಆನ್ಸರ್‌ ಕೂಡಾ ಅಪ್‌ಲೋಡ್‌ ಮಾಡಿದೆ.

ಅಭ್ಯರ್ಥಿಗಳು https://jeemai.nta.nic.in ಗೆ ಭೇಟಿ ನೀಡುವ ಮೂಲಕ ತಮ್ಮ ಫಲಿತಾಂಶಗಳನ್ನು ಮತ್ತು ಎರಡೂ ಅವಧಿಗಳ ಸಂಯೋಜಿತ ಶೇಕಡವಾರು ಸ್ಕೋರ್‌ ಪರಿಶೀಲನೆ ಮಾಡಬಹುದು.

ನೂರಕ್ಕೆ 100 ಅಂಕ ಗಳಿಸಿದ ಟಾಪರ್‌ಗಳು
1. ರಾಜಸ್ಥಾನ: ಓಂ ಪ್ರಕಾಶ್ ಬೆಹೆರಾ, ಸಕ್ಷಮ್ ಜಿಂದಾಲ್, ಅರ್ನವ್ ಸಿಂಗ್, ರಜಿತ್ ಗುಪ್ತಾ, ಮೊಹಮ್ಮದ್ ಅನಾಸ್, ಲಕ್ಷ್ಯ ಶರ್ಮಾ
2. ಆಂಧ್ರಪ್ರದೇಶ: ಸಾಯಿ ಮನೋಜ್ಞ ಗುತ್ತಿಕೊಂಡ
3. ದೆಹಲಿ: ದಕ್ಷ್, ಹರ್ಷ್ ಝಾ
4. ಗುಜರಾತ್: ಶಿವೇನ್ ವಿಕಾಸ್ ತೋಷ್ನಿವಾಲ್, ಅದಿತ್ ಪ್ರಕಾಶ್ ಬಾಗ್ಡೆ
5. ಕರ್ನಾಟಕ: ಕುಶಾಗ್ರ ಗುಪ್ತ
6. ಮಹಾರಾಷ್ಟ್ರ: ಆಯುಷ್ ರವಿ ಚೌಧರಿ, ಸಾನಿಧ್ಯ ಸರಾಫ್, ವಿಷಾದ್ ಜೈನ್
7. ತೆಲಂಗಾಣ: ವಂಗಲಾ ಅಜಯ್ ರೆಡ್ಡಿ, ಬಾನಿ ಬ್ರತಾ ಮಾಝಿ, ಹರ್ಷ್ ಎ ಗುಪ್ತಾ
8. ಉತ್ತರ ಪ್ರದೇಶ: ಶ್ರೇಯಾ ಲೋಹಿಯಾ, ಕುಶಾಗ್ರಾ ಬಂಗಹಾ, ಸೌರಭ್
9. ಪಶ್ಚಿಮ ಬಂಗಾಳ: ದೇವದತ್ತ ಮಾಂಝಿ, ಆರ್ಕಿಸ್ಮನ್ ನಂದಿ

ಈ ಬಾರಿ 15,39,848 ವಿಶಿಷ್ಟ ಅಭ್ಯರ್ಥಿಗಳು ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದು, ಈ ಪೈಕಿ 14,75,103 ಮಂದಿ ಪರೀಕ್ಷೆ ಬರೆದಿದ್ದಾರೆ. ಜೆಇಇ ಅಡ್ವಾನ್ಸ್ಡ್‌ 2025ರ ಕಟ್‌-ಆಫ್‌ ಶುಕ್ರವಾರ ಬಿಡುಗಡೆ ಮಾಡಲಾಗಿದೆ. ಇದರಲ್ಲಿ 2,50,236 ಅಭ್ಯರ್ಥಿಗಳು ಅಡ್ವಾನ್ಸ್ಡ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ.

Comments are closed.