Mangaluru : ನೇಮೋತ್ಸವದ ಫ್ಲೆಕ್ಸ್ ತೆಗೆಸಿ ವಕ್ಫ್ ಪ್ರತಿಭಟನೆ ಬೋರ್ಡ್ ಹಾಕಿಸಿದ ಶಾಸಕ ಅಶೋಕ್ ರೈ – ಭಾರೀ ಆಕ್ರೋಶ !!

Share the Article

 

Mangaluru : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಕ್ಫ್ ಕಾಯಿದೆ ವಿರೋಧಿಸಿ ಮಂಗಳೂರಿನಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆದಿದೆ. ಈ ವೇಳೆ ಮಂಗಳೂರಿನ ಅಡ್ಯಾರಿನಲ್ಲಿ ನೇಮೋತ್ಸವದ ಫ್ಲೆಕ್ಸ್ ತೆರವುಗೊಳಿಸಿ ವಕ್ಫ್ ಪ್ರತಿಭಟನೆಗೆ ಆಗಮಿಸುತ್ತಿರುವ ಶಾಸಕ ಅಶೋಕ್ ರೈಗೆ ಸ್ವಾಗತ ಕೋರಿ ಬೋರ್ಡ್ ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ

 

ಹೌದು, ಈ ಹಿಂದೆಯೇ ನಿಗದಿಯಾದಂತೆ ಅಡ್ಯಾರ್ನಲ್ಲಿ ನಡೆಯಲಿರುವ ಗ್ರಾಮ ದೈವಗಳ ನೇಮೋತ್ಸವಕ್ಕೆ ಹಾಕಿದ್ದ ನೇಮೋತ್ಸವದ ಧ್ವಜಪತಾಕೆ ಬಂಟಿಂಗ್ಸ್ ಹಾಗೂ ಇನ್ನಿತರ ಬೃಹತ್ ಕಟೌಟ್ಗಳನ್ನು ಏಪ್ರಿಲ್ 18ರಂದು ನಡೆಯಲಿರುವ ವಕ್ಫ್ ಹೋರಾಟದ ಹಿನ್ನೆಲೆಯಲ್ಲಿ ತೆಗೆಯುವಂತೆ ಪೊಲೀಸರು ಆದೇಶ ನೀಡಿದ್ದರು. ಇದನ್ನೆಲ್ಲ ಶಾಸಕ ಅಶೋಕ್ ರೈ ಅವರ ಅವರ ಫ್ಲೆಕ್ಸ್ ಮೊದಲು ಹಾಕಿದ್ದ ನೇಮೋತ್ಸವದ ಫ್ಲೆಕ್ಸ್ ಜಾಗದಲ್ಲಿ ರಾರಾಜಿಸುತ್ತಿತ್ತು. ಹೀಗಾಗಿ ಕರಾವಳಿಯಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿದೆ.

Comments are closed.