Education Department: ಖಾಸಗಿ ಶಾಲೆಗಳ ದಾಖಲಾತಿಗೆ ಸರಕಾರದಿಂದ ನಿಯಮ ಜಾರಿ!

Education Department: ಖಾಸಗಿ ಶಾಲೆಗಳ ದಾಖಲಾತಿಗೆ ಶಿಕ್ಷಣ ಇಲಾಖೆ ಹೊಸ ರೂಲ್ಸ್ ಬಿಡುಗಡೆ ಮಾಡಿದ್ದು, ಈ ಮೂಲಕ ಮೊದಲಿದ್ದ ಕೆಲವೊಂದು ನಿಯಮಗಳಿಗೆ ಬ್ರೇಕ್ ಬಿದ್ದಿದೆ.
ಖಾಸಗಿ ಶಾಲೆಗಳಿಗೆ ರೂಲ್ಸ್ ಏನು?
> ಶಾಲಾ ಪ್ರವೇಶಕ್ಕಾಗಿ ವಿದ್ಯಾರ್ಥಿಯನ್ನಾಗಲಿ ಅಥವಾ ಅವರ ಪೋಷಕರನ್ನಾಗಲಿ ಪರೀಕ್ಷಿಸುವಂತಿಲ್ಲ
> ಪೋಷಕರು ಅಥವಾ ವಿದ್ಯಾರ್ಥಿಗಳಿಗೆ ಸಂದರ್ಶನ ಮಾಡುವಂತಿಲ್ಲ.
> ಶಾಲೆಗಳು ತಮ್ಮ ಶಾಲಾ ಶುಲ್ಕವನ್ನು ಕಡ್ಡಾಯವಾಗಿ ನೋಟಿಸ್, ಶಾಲಾ ಜಾಲತಾಣ, ಎಸ್‌ಎಟಿಎಸ್‌ನಲ್ಲಿ ಪ್ರಕಟಿಸಬೇಕು.
> ಶುಲ್ಕದ ಸಂಪೂರ್ಣ ಮಾಹಿತಿಯನ್ನು ಶಾಲೆಯ ಮಾಹಿತಿ ಪುಸ್ತಕದಲ್ಲಿ ಮುದ್ರಿಸಬೇಕು.
> ಶಾಲಾ ಆಡಳಿತ ಮಂಡಳಿಯೂ ತಾವು ಅಧಿಸೂಚಿಸಿದ ಶುಲ್ಕವನ್ನು ಹೊರತುಪಡಿಸಿ ವಿದ್ಯಾರ್ಥಿಗಳು ಅಥವಾ ಪೋಷಕರಿಂದ ಇತರೇ ಯಾವುದೇ ಶುಲ್ಕ ಪಡೆಯುವಂತೆ ಇಲ್ಲ.
> ಖಾಸಗಿ ಶಾಲೆಗಳು ಕಡ್ಡಾಯವಾಗಿ 25% ಆರ್‌ಟಿಇ ಸೀಟು ಮೀಸಲಿಡಬೇಕು.
> ಎಸ್‌ಸಿ-ಎಸ್‌ಟಿ ವರ್ಗದ ಆಡಳಿತ ಮಂಡಳಿಯ ಶಾಲೆಗಳಲ್ಲಿ ಕಡ್ಡಾಯ 50% ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳು ಇರಬೇಕು.
> ಸಹ ಶಿಕ್ಷಣ ಹೊಂದಿರುವ ಶಾಲೆಗಳಲ್ಲಿ ಕಡ್ಡಾಯವಾಗಿ ಮೀಸಲಾತಿ ಅನ್ವಯ ಒಟ್ಟು ಪ್ರದೇಶದಲ್ಲಿ 50% ಹೆಣ್ಣುಮಕ್ಕಳಿಗೆ ಕಡ್ಡಾಯವಾಗಿ ನೀಡಬೇಕು.
Comments are closed.