Puttur: ಜಾತ್ರಾ ಪ್ರಯುಕ್ತ ಎ.16, 17ರಂದು ವಾಹನ ಸಂಚಾರ ಮಾರ್ಗದಲ್ಲಿ ತಾತ್ಕಾಲಿಕ ಬದಲಾವಣೆ!

Puttur: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರಾ ಪ್ರಯುಕ್ತ ಎ.16 ಹಾಗೂ 17ರಂದು ಸಂಚಾರ ಮಾರ್ಗದಲ್ಲಿ ತಾತ್ಕಾಲಿಕ ಬದಲಾವಣೆಯನ್ನು ಮಾಡಲಾಗಿದೆ. ಮಂಗಳೂರು ವಿಟ್ಲ ಕಬಕ ಕಡೆಯಿಂದ ಬರುವ ವಾಹನಗಳು ಲಿನೆಟ್ ಪಡೀಲ್ ಕೊಟೇಚಾ ಹಾಲ್ ಕ್ರಾಸ್ ಸಾಲ್ಮರ ಎಪಿಎಂಸಿ-ದರ್ಬೆ-ಅಶ್ವಿನಿ ಜಂಕ್ಷನ್ ಮೂಲಕ ಸಂಚರಿಸುವಂತೆ ಸೂಚಿಸಲಾಗಿದೆ.
ಬಸ್ ಸಂಚಾರ:
ಎ.16 ಮತ್ತು 17ರಂದು ಸಂಜೆ 1 ಗಂಟೆಯ ನಂತರ ಬಸ್ ನಿಲ್ದಾಣದಿಂದ ಹೊರಡುವ ಎಲ್ಲಾ ಸಾರಿಗೆ ಬಸ್‌ಗಳು ಎಂ.ಟಿ.ರಸ್ತೆಯ ರಸ್ತೆಯ ಮೂಲಕ ತೆರಳಿ ಮುಂದೆ ಎಡಕ್ಕೆ ತಿರುಗಿ ಪರ್ಲಡ್ಕ ಬೈಪಾಸ್ ಮೂಲಕ ತೆರಳಬೇಕು. ಕಬಕ. ಮಂಗಳೂರು ಕಡೆಯಿಂದ ಬರುವ ಎಲ್ಲಾ ಸಾರಿಗೆ ಬಸ್‌ಗಳು ಲಿನೆಟ್ ಜಂಕ್ಷನ್ -ಬೊಳ್ವಾರು ಪಡೀಲ್ ಕೊಟೆಚಾ ಹಾಲ್ ಕ್ರಾಸ್ ಸಾಲ್ಮರ, ಎಂಪಿಎಂಸಿ ಮೂಲಕ ಬಸ್ ನಿಲ್ದಾಣಕ್ಕೆ ಬರಬೇಕು. ಉಪ್ಪಿನಂಗಡಿ ಕಡೆಯಿಂದ ಬರುವ ಎಲ್ಲಾ ಸಾರಿಗೆ ಬಸ್ ಗಳು ಕೋಟೆಚಾ ಸಾಲ್ಮರ ಎಪಿಎಂಸಿ ಮೂಲಕ ಬಸ್ ನಿಲ್ದಾಣಕ್ಕೆ ಬರಬೇಕು. ಸುಳ್ಯ-ಸಂಪ್ಯ ಮಡಿಕೇರಿ ಕಡೆಯಿಂದ ಬರುವ ಎಲ್ಲಾ ಸಾರಿಗೆ ಬಸ್ ಗಳು ಅಶ್ವಿನಿ ಜಂಕ್ಷನ್ ದರ್ಬೆ ಅರುಣಾ ಥಿಯೇಟರ್ ಮೂಲಕ ಬಸ್ ನಿಲ್ದಾಣಕ್ಕೆ ಬರಬೇಕೆಂದು ಸೂಚಿಸಲಾಗಿದೆ.
ಆಟೋರಿಕ್ಷಾ ;
ನೆಹರೂನಗರ. ಬೊಳುವಾರು ಕಡೆಯಿಂದ ಬರುವ ಆಟೋರಿಕ್ಷಾಗಳು ಮಯೂರ ಇನ್‌ಲ್ಯಾಂಡ್ ಬಳಿ ಪ್ರಯಾಣಿಕರನ್ನು ಇಳಿಸಿ. ಉರ್ಲಾಂಡಿ ಕ್ರಾಸ್ ಮೂಲಕ ವಾಪಸ್ಸು ಸಂಚರಿಸುವುದು. ದರ್ಬೆ ಕಡೆಯಿಂದ ಬರುವ ಆಟೋರಿಕ್ಷಾಗಳು ಎಪಿಎಂಸಿ ರಸ್ತೆಯ ಮುಖಾಂತರ ನೆಲ್ಲಿಕಟ್ಟೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಮುಂಭಾಗದಿಂದ ಗಾಂಧಿಕಟ್ಟೆ ಕಡೆಗೆ ಬಂದು ಪ್ರಯಾಣಿಕರನ್ನು ಇಳಿಸಿ. ವಾಪಾಸು ಮುಖ್ಯ ರಸ್ತೆಯಾಗಿ ದರ್ಬೆ ಕಡೆಗೆ ಸಂಚರಿಸುವುದು. ಪರ್ಲಡ್ಕ ಬಪ್ಪಳಿಗೆ ಕಡೆಯಿಂದ ಬರುವ ಆಟೋರಿಕ್ಷಾಗಳು ಕಿಲ್ಲೆ ಮೈದಾನದ ಬಳಿ ಪ್ರಯಾಣಿಕರನ್ನು ಇಳಿಸಿ ವಾಪಾಸು ಸಂಚರಿಸುವುದು ಎಂದು ಸೂಚಿಸಲಾಗಿದೆ.
Comments are closed.