Caste census: ಜಾತಿ ಗಣತಿಯಲ್ಲಿ ಮುಸ್ಲಿಮರ ಸಂಖ್ಯೆಯೇ ಹೆಚ್ಚು!!

Caste census: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಲ್ಲಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015ರ (ಜಾತಿ ಗಣತಿ) ದತ್ತಾಂಶಗಳ ಅಧ್ಯಯನ ವರದಿಯನ್ನು ನಿನ್ನೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದಲ್ಲಿ ಮಂಡನೆಯಾಗಿದೆ. ಜೊತೆಗೆ ಇದು ಚರ್ಚೆಗೂ ಕೂಡ ಗ್ರಾಸವಾಗಿದೆ.
ಹೌದು, ಸಚಿವ ಸಂಪುಟದಲ್ಲಿ ಮಂಡನೆಯಾದ ಜಾತಿಗಣತಿಯ ದತ್ತಾಂಶದಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಳವಾಗಿದೆ. ರದಿಯ ಪ್ರಕಾರ ರಾಜ್ಯದಲ್ಲಿ 72.25 ಲಕ್ಷ ಮುಸ್ಲಿಮರು ಇದ್ದು, ಜನಸಂಖ್ಯೆಯಲ್ಲಿ ಶೇಕಡ 18.7 ರಷ್ಟು ಪಾಲು ಹೊಂದಿದ್ದಾರೆ.
ಅಂದಹಾಗೆ ರಾಜ್ಯದಲ್ಲಿ ಮುಸ್ಲಿಂ ಜನಸಂಖ್ಯೆ 75 ಲಕ್ಷ, ಲಿಂಗಾಯಿತ 66 ಲಕ್ಷ, ವೀರಶೈವ ಲಿಂಗಾಯಿತ 10 ಲಕ್ಷ, ಒಕ್ಕಲಿಗ 61 ಲಕ್ಷ, ಪರಿಶಿಷ್ಟ ಜಾತಿ ಒಂದು ಕೋಟಿ, ಪರಿಶಿಷ್ಟ ಪಂಗಡ 42 ಲಕ್ಷ, ಕುರುಬರು 44 ಲಕ್ಷ, ಬಣಜಿಗ 10 ಲಕ್ಷ, ಕ್ರಿಶ್ಚಿಯನ್ 9 ಲಕ್ಷ ಜನಸಂಖ್ಯೆ ಇದೆ. ಸಧ್ಯ ಮುಸ್ಲಿಂ ಜನಸಂಖ್ಯೆ ಹೆಚ್ಚಾಗಿರುವುದರಿಂದ ಪ್ರವರ್ಗ 2 ಬಿ ಅಡಿ ಕೇವಲ ಮುಸ್ಲಿಂ ಸಮುದಾಯಕ್ಕೆ ನೀಡುತ್ತಿರುವ ಶೇಕಡ 4ರಷ್ಟು ಮೀಸಲಾತಿಯನ್ನು ಶೇಕಡ 8ಕ್ಕೆ ಹೆಚ್ಚಳ ಮಾಡಬೇಕು ಎಂದು ಆಯೋಗ ಶಿಫಾರಸು ಮಾಡಿದೆ.
Comments are closed.