Uppinangady: ಉಪ್ಪಿನಂಗಡಿ: ಎಟಿಎಂನಲ್ಲಿ ಕಳವಿಗೆ ಯತ್ನ:ಬೆಳ್ತಂಗಡಿ ಮೂಲದ ರಫೀಕ್ ಅರೆಸ್ಟ್!

Uppinangady: ಕರಾಯ ಗ್ರಾಮದ ಕಲ್ಲೇರಿಯಲ್ಲಿ ಖಾಸಗಿ ಕಂಪೆನಿಯ ಎಟಿಎಂ ಕೇಂದ್ರಕ್ಕೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ ಪ್ರಕರಣದಲ್ಲಿ ಆರೋಪಿ ಮಹಮ್ಮದ್ ರಫೀಕ್‌(35)ನನ್ನು ಉಪ್ಪಿನಂಗಡಿ (Uppinangady) ಪೊಲೀಸರು ಬಂಧಿಸಿದ್ದಾರೆ.

ಕಲ್ಲೇರಿಯಲ್ಲಿನ ತಣ್ಣೀರುಪಂತ ಕೃಷಿ ಪತ್ತಿನ ಸಹಕಾರಿ ಸಂಘದ ಕಟ್ಟಡದಲ್ಲಿ ಇಂಡಿಯಾ ವನ್ ಎಂಬ ಹೆಸರಿನ ಖಾಸಗಿ ಸಂಸ್ಥೆಯ ಎಟಿಎಂ ಕೇಂದ್ರಕ್ಕೆ ನುಗ್ಗಿದ ಕಳ್ಳ ಅಲ್ಲಿನ ಸಿಸಿ ಕೆಮರಾವನ್ನು ಕಿತ್ತೆಸೆದು ಎಟಿಎಂ ಮೆಷಿನ್‌ನಲ್ಲಿದ್ದ ನಗದು ಕಳವಿಗೆ ಯತ್ನಿಸಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.

Comments are closed.