Bantwala: ಶಬರಿಮಲೆಯಲ್ಲಿ ಬಂಟ್ವಾಳದ ಶಿಕ್ಷಕ ಕುಸಿದು ಸಾವು!

Bantwala: ಶಬರಿಮಲೆಗೆ ತೆರಳಿದ್ದ ಬಂಟ್ವಾಳ ಶಾಲೆಯ ಶಿಕ್ಷಕರೊಬ್ಬರು ಪಂಬ ಸನ್ನಿಧಿಯಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ಎ.9 ಬುಧವಾರ ನಡೆದಿದೆ.
ಬಂಟ್ವಾಳ ತಾಲೂಕಿನ ಕೆದಿಲ ಪಾಟ್ರಕೋಡಿ ಸರಕಾರಿ ಹಿ.ಪ್ರಾ.ಶಾಲೆಯ ಮುಖ್ಯಶಿಕ್ಷಕ ಉಮರಗಿ ಶರಣಪ್ಪ (57) ಮೃತ ಹೊಂದಿದವರು.
ಎ.8 ರಂದು ಶಬರಿಮಲೆಗೆ ಬಂಟ್ವಾಳ ತಂಡದ ಜೊತೆಗೆ ಹೊರಟಿದ್ದು, ಬುಧವಾರ ಮುಂಜಾನೆ ದೇವರ ದರ್ಶನಕ್ಕೆ ತೆರಳಲು ಹೋಗುತ್ತಿದ್ದ ಸಂದರ್ಭದಲ್ಲಿ ಪಂಬ ಸನ್ನಿಧಿಯಲ್ಲಿ ಕುಸಿದು ಬಿದ್ದಿದ್ದಾರೆ. ಹೃದಯಾಘಾತದಿಂದ ಸಾವಿಗೀಡಾಗಿರುವ ಶಂಕೆ ಇದೆ.
Comments are closed.