Belthangady: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಹೊಂಡಕ್ಕೆ ಉರುಳಿದ ಕಾರು!

Belthangady: ಮೂಡಿಗೆರೆಯಿಂದ ಬೆಳ್ತಂಗಡಿಯತ್ತ ಸಂಚಾರ ಮಾಡುತ್ತಿದ್ದ ಕಾರೊಂದು ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆ ಗ್ರಾಮದ ಸೀಟು ಸಮೀಪ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಹೊಂಡಕ್ಕೆ ಉರುಳಿ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಎ.7 ರಂದು ನಡೆದಿದೆ.
ಕಾಲೇಜೊಂದರ ದಾಖಲಾತಿಗೆಂದು ಬರುತ್ತಿದ್ದ ಸಕಲೇಶಪುರ ಕಡೆಯ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದು, ಓರ್ವ ಮಹಿಳೆ ಗಾಯಗೊಂಡಿರುವುದಾಗಿ ವರದಿಯಾಗಿದೆ.
Comments are closed.