Puttur: ಪುತ್ತೂರು ಬನ್ನೂರು ನಿವಾಸಿ ಸಂದೀಪ್ ಹೃದಯಾಘಾತಕ್ಕೆ ಬಲಿ

Share the Article

ಪುತ್ತೂರು: ಬನ್ನೂರು ಅಡೆಂಚಿಲಡ್ಕ ನಿವಾಸಿ ದುರ್ಗಾದಾಸ್ ಯಾನೆ ಸಂದೀಪ್(31ವ)ರವರು ಏ.7ರಂದು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಕುಂಟ್ಯಾನ ದೇವಸ್ಥಾನದ ಜಾತ್ರೋತ್ಸವದ ಸಿದ್ಧತೆಯಲ್ಲಿ ಸ್ವಯಂ ಸೇವಕನಾಗಿ ತೊಡಗಿಸಿಕೊಂಡಿದ್ದ ಸಂದೀಪ್ ಸಾವು ಎಲ್ಲರನ್ನೂ ಆಘಾತಕ್ಕೆ ದೂಡಿದೆ.

ಸಂದೀಪ್‌ ಪುತ್ತೂರಿನ ಖಾಸಗಿ ಸಂಸ್ಥೆಯಲ್ಲಿ ಡೆಲಿವರಿ ಕೆಲಸ ನಿರ್ವಹಿಸುತ್ತಿದ್ದು, ಬೆಳಿಗ್ಗೆ ಆರೋಗ್ಯದಲ್ಲಿ ವ್ಯತ್ಯಯ ಹಿನ್ನೆಲೆಯಲ್ಲಿ ಸ್ಥಳೀಯ ಕ್ಲಿನಿಕ್‌ಗೆ ತೆರಳಿದ್ದರು. ತೀವ್ರ ಅಸ್ವಸ್ಥಗೊಂಡ ಅವರನ್ನು ಅಲ್ಲಿಂದ ತಕ್ಷಣ ಪುತ್ತೂರು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಸಂದೀಪ್ ದುರ್ಗಾದಾಸ್ ಯಾನೆ ಸಂದೀಪ್ ರವರು ಬನ್ನೂರು ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನದ ಜಾತ್ರೋತ್ಸವದ ಸಿದ್ಧತೆಗೆ ಬಂಟಿಂಕ್ಸ್, ದ್ವಾರದ ಸಹಿತ ಹಲವು ಕಾರ್ಯದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು. ಏ.6ರಂದು ರಾತ್ರಿ ಕೂಡಾ ಜಾತ್ರೆಯ ಸಿದ್ಧತೆಗೆ ದ್ವಾರ ಹಾಕುವ ಕೆಲಸದಲ್ಲಿ ತೊಡಗಿಸಿಕೊಂದಿದ್ದರು.

Comments are closed.