ಮಂಗಳೂರು: ನೀಟ್ ವಿದ್ಯಾರ್ಥಿ ನಾಪತ್ತೆ, ಕಳೆದ ವರ್ಷ ಕೂಡಾ ಓಡಿ ಹೋಗಿದ್ದ!

Share the Article

ಮಂಗಳೂರು: ನೀಟ್ ತರಬೇತಿಗೆ ಓದಲು ಹೋಗುವುದಾಗಿ ಹೇಳಿ ಹೋದ ವಿದ್ಯಾರ್ಥಿ ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.

ಉತ್ತರ ಭಾರತ ಮೂಲದ ಸಂಜಯ ಬೇರಾ (21) ನಾಪತ್ತೆಯಾದ ವಿದ್ಯಾರ್ಥಿ. ಸಂಜಯ ಕಳೆದ 2 ವರ್ಷಗಳಿಂದ ನೀಟ್ ಕೋಚಿಂಗ್ ಪಡೆಯುತ್ತಿದ್ದು, ಮಾ. 21ರಂದು ರಾತ್ರಿ 7.30ಕ್ಕೆ ಮನೆಯವರಲ್ಲಿ ಹೇಳಿ ಹೋದವನು ವಾಪಸು ಮನೆಗೆ ಬಂದಿಲ್ಲ. ಬೈಕಂಪಾಡಿಯ ರಸ್ತೆಯಲ್ಲಿ ಮೊಬೈಲ್ ಫೋನ್ ಒಂದು ಬಿದ್ದಿದ್ದು, ಅದನ್ನು ಯಾರೋ ಸಾರ್ವಜನಿಕರು ಹೊಟೇಲ್‌ನವರಿಗೆ ತಂದು ಕೊಟ್ಟಿದ್ದಾರೆ. ಆ ನಂತರ ಈತನ ನಾಪತ್ತೆ ಪ್ರಕರಣ ಪತ್ತೆಯಾಗಿದೆ.

ಈತ ಕಳೆದ ವರ್ಷ ಡಿಸೆಂಬರ್‌ನಲ್ಲಿಯೂ ಇದೆ ರೀತಿ ಕಾಣೆಯಾಗಿದ್ದು, 21 ದಿನಗಳ ನಂತರ ತಮಿಳುನಾಡಿನಲ್ಲಿ ಪತ್ತೆಯಾಗಿದ್ದ. ಸುಮಾರು 5.8 ಅಡಿ ಎತ್ತರ, ಎಣ್ಣೆಕಪ್ಪು ಮೈಬಣ್ಣ, ಸಾಧಾರಣ ಶರೀರ, ಕಪ್ಪು ಜೀನ್ಸ್ ಪ್ಯಾಂಟ್, ಟಿ-ಶರ್ಟ್, ಕಪ್ಪು ಬಣ್ಣದ ಬ್ಯಾಗ್ ಧರಿಸಿದ್ದ. ಕೊಂಚ ಕನ್ನಡ, ಹಿಂದಿ, ಬಂಗಾಳಿ, ಇಂಗ್ಲಿಷ್ ಭಾಷೆಗಳನ್ನು ಮಾತನಾಡುತ್ತಾನೆ ಎಂದು ಕಾವೂರು ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

Comments are closed.