Guttigar: ತಾಯಿ ಮಗ ವಿಷ ಸೇವನೆ ಪ್ರಕರಣ; ಮಗ ಸಾವು, ಕಾರಣ ಬಹಿರಂಗ!

Share the Article

Sullia: ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ನಡುಗಲ್ಲು ಎಂಬಲ್ಲಿ ಇಲಿ ಪಾಷಾಣ ಸೇವಿಸಿ ತಾಯಿ ಮಗ ಆತ್ಮಹ್ಯತ್ಯೆಗೆ ಯತ್ನ ಮಾಡಿದ್ದು, ಮಗ ಸಾವಿಗೀಡಾಗಿದ್ದು, ತಾಯಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿತ್ತು.

ಈ ಕುರಿತು ಸುಬ್ರಹ್ಮಣ್ಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ನಿತಿನ್‌ ಅವರ ಪತ್ನಿ ದೀಕ್ಷಾ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮನೆ ಬಿಟ್ಟು ಹೋಗಿದ್ದು ಈ ಕೃತ್ಯಕ್ಕೆ ಪ್ರಚೋದನೆ ನೀಡಿದೆ ಎನ್ನುವ ಶಂಕೆ ವ್ಯಕ್ತವಾಗಿದೆ.

ನಾಲ್ಕೂರು ಗ್ರಾಮದ ದೇರಪ್ಪಜ್ಜನಮನೆ ನಿವಾಸಿ ಕುಶಾಲಪ್ಪ ಗೌಡ ಅವರ ಮಗ ನಿತಿನ್‌ (32) ಮೃತಪಟ್ಟ ವ್ಯಕ್ತಿ. ಇವರ ತಾಯಿ ಸುಲೋಚನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತ ನಿತಿನ್‌ ಐಟಿಐ ವಿದ್ಯಾಭ್ಯಾಸ ಹೊಂದಿದ್ದು, ಕೃಷಿಕರಾಗಿ ದುಡಿಯುತ್ತಿದ್ದರು. ದೀಕ್ಷಾ ಎಂಬುವವರನ್ನು ಒಂದು ವರ್ಷದ ಹಿಂದೆ ಮದುವೆಯಾಗಿದ್ದರು. ಸ್ಥಳೀಯ ಕಾಲೇಜೊಂದರಲ್ಲಿ ಅತಿಥಿ ಉಪನ್ಯಾಸಕಿಯಾಗಿ ಇವರು ಕೆಲಸ ಮಾಡುತ್ತಿದ್ದರು. ಮಾ.31 ರಂದು ದೀಕ್ಷಾ ಮನೆಯಲ್ಲಿ ಜಗಳವಾಡಿ, ಸಂಬಂಧಿಕರಾಗಿ ಲಕ್ಷ್ಮೀ ನಾರಾಯಣ ಅವರ ಮನೆಗೆ ತೆರಳಿ ಪತಿ ಜೊತೆ ವಾಸಿಸಲು ಸಾಧ್ಯವಿಲ್ಲ ಎಂದು ಹೇಳಿ ತಮ್ಮ ಮನೆಗೆ ಹೋಗಿದ್ದರು.

ಎ.6 ರಂದು ಈ ವಿಷಯದ ಕುರಿತು ಚರ್ಚೆ ಮಾಡಲು ಲಕ್ಷ್ಮೀ ನಾರಾಯಣ ಅವರು ನಿತಿನ್‌ ಮನೆಗೆ ಭೇಟಿ ನೀಡಿದಾಗ ನಿತಿನ್‌ ಮತ್ತು ತಾಯಿ ಸುಲೋಚನ ವಿಷ ಸೇವನೆ ಮಾಡಿರುವುದು ತಿಳಿದು ಬಂದಿದೆ.

ನಿತಿನ್‌ ಅವರ ತಂದೆ ಕುಶಾಲಪ್ಪ ಅವರು ಹೇಳಿರುವ ಪ್ರಕಾರ, ದೀಕ್ಷಾ ಮನೆ ಬಿಟ್ಟು ಹೊಗಿದ್ದರಿಂದ ಮನನೊಂದು ವಿಷ ಸೇವನೆ ಮಾಡಿದ್ದಾರೆ ಎನ್ನಲಾಗಿದೆ. ನಿತಿನ್‌ ಚಿಕ್ಕಪ್ಪ ಅನಂತಕೃಷ್ಣ ಅವರು ನೀಡಿದ ದೂರಿನ ಅನ್ವಯ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.