ಬೆಳ್ತಂಗಡಿ : ಬೆಳಾಲು ಶ್ರೀ ಧ.ಮಂ. ಪ್ರೌಢ ಶಾಲೆಯ ವಿದ್ಯಾರ್ಥಿನಿಯರಿಗೆ ಬೈಸಿಕಲ್ ವಿತರಣೆ

ಬೆಳ್ತಂಗಡಿ: ಬೆಳಾಲು ಶ್ರೀ ಧ.ಮಂ. ಪ್ರೌಢ ಶಾಲೆಯ ಹತ್ತು ವಿದ್ಯಾರ್ಥಿನಿಯರಿಗೆ ರೋಟರಿ ಕ್ಲಬ್, ಯಲಹಂಕ, ಬೆಂಗಳೂರು ಇವರ ವತಿಯಿಂದ ಬೈಸಿಕಲ್ ವಿತರಣಾ ಕಾರ್ಯಕ್ರಮ ಜರಗಿತು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್, ಯಲಹಂಕ, ಬೆಂಗಳೂರು ಇದರ ಅಧ್ಯಕ್ಷರಾದ ಅಭಿಲೇಖ ಪಿ. ಮಂತ್ರಿ, ಕಾರ್ಯದರ್ಶಿ ಶ್ರೀ ಹರ್ಷ ವಸಿಷ್ಠ, ರೋಟರಿಕ್ಲಬ್ ನ ಚುನಾಯಿತ ಅಧ್ಯಕ್ಷರಾದ ಹಾಗೂ ಬೆಳಾಲು ಶಾಲೆಯ ಹಿರಿಯ ವಿದ್ಯಾರ್ಥಿಯಾದ ಅಶೋಕ್ ಹೆಬ್ಬಾರ್, ಬೈಸಿಕಲ್ ದಾನಿಗಳಾದ ವಿದ್ಯರಾಜ್ ಶೆಟ್ಟಿ ಬೈಸಿಕಲ್ ಗಳನ್ನು ವಿತರಿಸಿ,ಶುಭಹಾರೈಸಿದರು. ಈ ಸಂದರ್ಭದಲ್ಲಿ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾದ ಗಣೇಶ್ ಕನಿಕ್ಕಿಲ , ಅಧ್ಯಕ್ಷರಾದ ಶಶಿಧರ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ಪ್ರಾಸ್ತಾವಿಕ ನುಡಿಗಳೊಂದಿಗೆ ಮುಖ್ಯೋಪಾಧ್ಯಾಯರಾದ ಜಯರಾಮ್ ಮಯ್ಯ ಸ್ವಾಗತಿಸಿದರು.
ಶಿಕ್ಷಕ ಸುಮನ್ ಯು.ಎಸ್. ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Comments are closed.