of your HTML document.

ಶಕ್ತಿ ಯೋಜನೆ ಎಫೆಕ್ಟ್: ಊರೂರು ತಿರುಗಿ ಹೋಳಿಗೆ ಮಾರಾಟ ಮಾಡಿದ ಮಹಿಳೆಯರು, ಸಿಎಂ ಟ್ವೀಟ್ ಶ್ಲಾಘನೆ!

Bengaluru: ಶಕ್ತಿ ಯೋಜನೆಯ ಲಾಭದಿಂದ ಉಚಿತವಾಗಿ ಪ್ರಯಾಣಿಸಿ, ಪೇಟೆ ಪಟ್ಟಣಗಳಲ್ಲಿ ಹೋಳಿಗೆಯನ್ನು ಮಾರಿ ಕೈತುಂಬಾ ಸಂಬಳ ಪಡೆದ ಮಹಿಳೆಯರ ಬಗ್ಗೆ ಸಿಎಂ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಲ್ಲಿನ ಸ್ಥಳೀಯ ಮಹಿಳಾ ಸಂಘದ ವತಿಯಿಂದ ದೂರದ ವಿಜಯಪುರದ ಇಂಡಿಯಲ್ಲಿ ಹೋಳಿಗೆ ತಯಾರಿಸಿ, ಶಕ್ತಿ ಯೋಜನೆಯಿಂದ ಉಚಿತವಾಗಿ ಬೆಂಗಳೂರಿಗೆ ಪ್ರಯಾಣಿಸಿ ಅಧಿಕ ಲಾಭದಿಂದ ಮಹಿಳೆಯರು ಹೋಳಿಗೆಯನ್ನು ಮಾರಾಟ ಮಾಡಿದ್ದಾರೆ.
ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಎಕ್ಸ್‌ನಲ್ಲಿ ಬರೆದುಕೊಂಡು ಸಂತಸಪಟ್ಟು ಮಹಿಳೆಯರ ಕಾರ್ಯಕ್ಕೆ ಶಹಬ್ಬಾಸ್ ಎಂದಿದ್ದಾರೆ.

ಸಿದ್ದರಾಮಯ್ಯ ಟ್ವೀಟ್!

“ಮಹಿಳೆಯರು ಒಡಲ ಧ್ವನಿಯೆಂಬ ಮಹಿಳಾ ಸಂಘ ಕಟ್ಟಿಕೊಂಡು, ದೂರದ ವಿಜಯಪುರದ ಇಂಡಿಯಲ್ಲಿ ಹೋಳಿಗೆ ತಯಾರಿಸಿ ಶಕ್ತಿ ಯೋಜನೆಯಡಿ ಸಾರಿಗೆ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಬೆಳೆಸಿ ಬೆಂಗಳೂರಿಗೆ ತಂದು ವ್ಯಾಪಾರ ಮಾಡಿ, ಕೈತುಂಬ ಆದಾಯ ಕಟ್ಟಿಕೊಂಡ ಈ ಮಹಿಳೆಯರ ಕತೆ ಆಸಕ್ತಿ ಮೂಡಿಸುತ್ತಿದೆ.”
“ಹೆಂಡತಿ ದೇವಸ್ಥಾನಕ್ಕೆ ಹೋದವಳು ತಿಂಗಳಾದ್ರೂ ಬರಲಿಲ್ಲ, ಶಕ್ತಿ ಯೋಜನೆ ಬಂದ್ಮೇಲೆ ಹೆಂಗಸರು ಮನೆಯಲ್ಲೇ ಇರಲ್ಲ ಎಂಬಿತ್ಯಾದಿ ಹೊಟ್ಟೆ ತುಂಬಿದ ಮಂದಿಯ ವ್ಯವಸ್ಥಿತ ಅಪಪ್ರಚಾರಗಳ ಬದಲು ಇಂತಹ ಸುದ್ದಿಗಳು ಹೆಚ್ಚು ಜನರನ್ನು ತಲುಪಬೇಕು, ಆ ಮೂಲಕ ಮತ್ತಷ್ಟು ಮಹಿಳೆಯರು ಬದುಕಿನ ಹೊಸಹಾದಿ ಕಂಡುಕೊಳ್ಳುವಂತಾಗಬೇಕು. ಆಗಲೇ ಯೋಜನೆಯ ಉದ್ದೇಶ ಪೂರ್ಣ ಸಾಕಾರಗೊಳ್ಳಲಿದೆ.”
— ಸಿದ್ದರಾಮಯ್ಯ, ಮಾನ್ಯ ಮುಖ್ಯಮಂತ್ರಿಗಳು

Comments are closed.