of your HTML document.

Job: ವಿವಿಧ ಕಂಪೆನಿಗಳಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Job: ಕೇಂದ್ರ ಸರ್ಕಾರದ(Central Govt) ಪಿಎಂ ಮಿನಿಸ್ಟರ್ಸ್ ಇಂಟರ್ನ್ಶಿವಪ್ ಯೋಜನೆಯಡಿ ಯುವಕ, ಯುವತಿಯರಿಗೆ ಅವಕಾಶ ಒದಗಿಸುವ ಮೂಲಕ ನವೀನ ಕೌಶಲ್ಯವನ್ನು ವೃದ್ಧಿಸಿಕೊಳ್ಳಲು ವೇದಿಕೆ ಕಲ್ಪಿಸಲಾಗಿದೆ. ಈ ಮೂಲಕ 5 ವರ್ಷಗಳಲ್ಲಿ ಉನ್ನತಮಟ್ಟದ 300ಕ್ಕೂ ಹೆಚ್ಚಿನ ಕಂಪೆನಿಗಳಲ್ಲಿ(Company) ಅವಕಾಶ ಕಲ್ಪಿಸಲಾಗಿದ್ದು, ಆಸಕ್ತಿಯುಳ್ಳ ಅಭ್ಯರ್ಥಿಗಳಿಂದ(Candidate) ಆನ್ಲೈುನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅವಧಿಯು 12 ತಿಂಗಳುಗಳಾಗಿದ್ದು ಮಾಸಿಕ ರೂ.5000 ಶಿಷ್ಯವೇತನ ನೀಡಲಾಗುವುದು. ಅಭ್ಯರ್ಥಿಯು ಕನಿಷ್ಟ ಮೂರು ಇಂಟರ್ನ್ಶಿಳಪ್ಗಲಳಿಗೆ ಅರ್ಜಿ ಸಲ್ಲಿಸಬಹುದು. ಆಯ್ಕೆಯಾಗುವ ಕಂಪೆನಿಗಳಲ್ಲಿ ಇಂಟರ್ನ್ಶಿವಪ್ ಮಾಡಬೇಕಾಗುತ್ತದೆ. ಅಭ್ಯರ್ಥಿಯು 21 ರಿಂದ 24 ವರ್ಷ ವಯೋಮಿತಿಯೊಳಗಿಬೇಕು. ಯಾವುದೇ ಪದವಿ ಡಿಪ್ಲೋಮಾ ಐಟಿಐ, 10ನೇ ತರಗತಿ ಹಾಗೂ ಪಿಯುಸಿ ಪೂರ್ಣಗೊಳಿಸಿರಬೇಕು. ಕುಟುಂಬದ ವಾರ್ಷಿಕ ಆದಾಯ ರೂ.8.00 ಲಕ್ಷಗಳಿಗಿಂತ ಹೆಚ್ಚಿರಬಾರದು. ಕುಟುಂಬದ ಸದಸ್ಯರು ಯಾವುದೇ ಸರ್ಕಾರಿ ಉದ್ಯೋಗಿಯಾಗಿರಬಾರದು. ಇಂಟರ್ನ್ಶಿಾಪ್ ತರಬೇತಿಯು 12 ತಿಂಗಳ ಅವಧಿ ಇರುತ್ತದೆ. ಇಂಟರ್ಶಿುಪ್ನ್ಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಕಂಪೆನಿ ಆಯೋಜಿಸಿದ ಸ್ಥಳದಲ್ಲಿ ಹೋಗಿ ತರಬೇತಿ ಪಡೆಯುವುದು. ಆಸಕ್ತಿಯುಳ್ಳ ಅಭ್ಯರ್ಥಿಗಳು www.pminternship.mca.gov.in ಜಾಲತಾಣದಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಮಂಜುನಾಥ್ ಅವರು ತಿಳಿಸಿದ್ದಾರೆ.

Comments are closed.