Recruitment: ಏರ್ಪೋರ್ಟ್ ನಲ್ಲಿ ಕೆಲಸ ಮಾಡುವ ಆಸೆಯೇ? ಯಾವ ಎಕ್ಸಾಮ್ ಇಲ್ಲ, ಭರ್ಜರಿ ಸಂಬಳ

Recruitment: ಏರ್ಪೋರ್ಟ್ ನಲ್ಲಿ ಕೆಲಸ ಮಾಡಬೇಕೆಂಬುದು ಹಲವರ ಆಸೆ. ಇದೀಗ ಈ ಆಸೆ ಈಡೇರುವ ಕಾಲ ಬಂದಿದೆ. ಯಾಕೆಂದರೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ಹಲವಾರು ಸಲಹೆಗಾರ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಪ್ರಕಟಣೆ ಹೊರಡಿಸಿ, ಅರ್ಜಿಗಳನ್ನು ಆಹ್ವಾನಿಸಿದೆ.
ಹೌದು, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇದ್ದು ಇದೀಗ ಪ್ರಾಧಿಕಾರವು ಅರ್ಜಿಯನ್ನು ಆಹ್ವಾನಿಸಿದೆ. ಕೆಲಸ ಪಡೆಯಲು ಬಯಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳ ಸ್ವಯಂ-ದೃಢೀಕೃತ ಪ್ರತಿಗಳೊಂದಿಗೆ ಅರ್ಜಿಯನ್ನು chqrectt@aai.aero ಇಮೇಲ್ ಐಡಿಗೆ ಕಳುಹಿಸಬಹುದು.
ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮಾರ್ಚ್ 19, 2025 ರಿಂದ ಪ್ರಾರಂಭವಾಗಿದ್ದು, ಕೊನೆಯ ದಿನಾಂಕವನ್ನು ಏಪ್ರಿಲ್ 2, 2025 ಎಂದು ನಿಗದಿಪಡಿಸಲಾಗಿದೆ. ಈ ನೇಮಕಾತಿ ಅಭಿಯಾನದಡಿ ಒಟ್ಟು 20 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಬಹುದು.
ಉದ್ಯೋಗದ ಮಾಹಿತಿ:
* ಹುದ್ದೆಯ ಹೆಸರು- ಸಲಹೆಗಾರ ಹುದ್ದೆ (Consultant)
* ಎಷ್ಟು ಹುದ್ದೆಗಳು – 20
* ಪ್ರತಿ ತಿಂಗಳ ಸಂಬಳ- 75,000 ರೂಪಾಯಿ
* ವಯಸ್ಸಿನ ಮತಿ- ಗರಿಷ್ಠ ವಯಸ್ಸು 65 ವರ್ಷಗಳು
ಅಭ್ಯರ್ಥಿಗಳಿಗೆ ಇರಬೇಕಾದ ಅರ್ಹತೆಗಳು:
* ಉದ್ಯೋಗ ಆಕಾಂಕ್ಷಿಯು 65 ವರ್ಷಗಳ ಒಳಗೆ ಇರಬೇಕು.
* ರಾಜ್ಯ ಅಥವಾ ಕೇಂದ್ರ ಸರ್ಕಾರದಲ್ಲಿ ಕೆಲಸ ಮಾಡಿದ ಅನುಭವ ಹೊಂದಿರಬೇಕು
* ರಕ್ಷಣಾ ಇಲಾಖೆಯಲ್ಲಿ ಕನಿಷ್ಠ 10 ವರ್ಷಗಳ ಸೇವೆ ಸಲ್ಲಿಸಿರುವವರಿಗೆ ಅವಕಾಶ.
* ಉದ್ಯೋಗದಿಂದ ನಿವೃತ್ತಿ ಪಡೆದಿದ್ದು ಕನಿಷ್ಠ ಒಂದು ತಿಂಗಳು ಕಳೆದಿರಬೇಕು.
* AAIಯಲ್ಲಿ 5 ವರ್ಷಕ್ಕಿಂತ ಹೆಚ್ಚು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿರುವ ಅಭ್ಯರ್ಥಿಗಳು ಅನರ್ಹರು.
ಆಯ್ಕೆ ಪ್ರಕ್ರಿಯೆ:
* ದಾಖಲೆ ಪರಿಶೀಲಿಸಿ ಹೆಸರುಗಳ ಶಾರ್ಟ್‌ಲಿಸ್ಟ್
* ವೈಯಕ್ತಿಕ ಸಂದರ್ಶನ
* ಸಂದರ್ಶನದ ಕಾರ್ಯಕ್ಷಮತೆ ಗಣನೆಗೆ ತೆಗೆದುಕೊಳ್ಳಲಾಗುತ್ತದೆ
Comments are closed.