B Y Vijayendra: ಬಿಜೆಪಿ ಎಂದಿಗೂ ಮುಸ್ಲಿಂ ವಿರೋಧಿ ಅಲ್ಲ, ಆದರೆ… – ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆ!!

B Y Vijayendra : ಬಿಜೆಪಿ ಯಾವತ್ತೂ ಕೂಡ ಮುಸ್ಲಿಂ ವಿರೋಧಿ ಪಕ್ಷ ಅಲ್ಲ ಎಂದು ಬಿಜೆಪಿಯ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ(B Y Vijayendra) ಅವರು ಹೇಳಿಕೆ ನೀಡಿದ್ದಾರೆ.
ಕಲಬುರ್ಗಿಯಲ್ಲಿ(Kalaburagi) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಭಾರತೀಯ ಜನತಾ ಪಾರ್ಟಿ ಎಂದಿಗೂ ಮುಸ್ಲಿಂ ವಿರೋಧಿಯಾಗಲು ಸಾಧ್ಯವಿಲ್ಲ. ನಮ್ಮ ಪಕ್ಷ ಮುಸ್ಲಿಂ ವಿರೋಧಿ ಅಲ್ಲವೇ ಅಲ್ಲ. ಆದರೆ ಹಿಂದೂ ವಿರೋಧಿ ನಿಲುವಿಗೆ ನಾವು ಪ್ರೋತ್ಸಾಹಿಸುವುದಿಲ್ಲ, ಅದನ್ನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.
ಅಲ್ಲದೆ ಹನಿಟ್ರ್ಯಾಪ್ ಪ್ರಕರಣ ಮತ್ತು 18 ಶಾಸಕರ ಅಮಾನತ್ತನ್ನು ಬಿಜೆಪಿ ವಿರೋಧಿಸುತ್ತದೆ, ಅಲ್ಲದೆ ಕಾಂಗ್ರೆಸ್ ಮಾಡುತ್ತಿರುವ ಅಲ್ಪಸಂಖ್ಯಾತರ ಓಲೈಕೆಯ ರಾಜಕಾರಣವನ್ನು ಖಂಡಿಸುತ್ತದೆ, ಇದರ ವಿರುದ್ಧ ಬಿಜೆಪಿ ಹೋರಾಡುತ್ತಿದ್ದು, ಜೆಡಿಎಸ್ ಕೂಡ ಬೆಂಬಲಿಸುತ್ತಿದೆ ಎಂದರು.
Comments are closed.