Karnataka Assembly : ವಿಧಾನಸಭೆಯಿಂದ 18 ಬಿಜೆಪಿ ಶಾಸಕರು 6 ತಿಂಗಳು ಅಮಾನತು – ಸರ್ಕಾರದ ಈ ಎಲ್ಲಾ ಸವಲತ್ತುಗಳಿಂದಲೂ ಕೋಕ್ !!

Karnataka Assembly : ನಮ್ಮ ರಾಜಕೀಯ ನಾಯಕರು ಯಾವೆಲ್ಲ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂಬುದು ನಿಜಕ್ಕೂ ಆಘಾತವನ್ನು ಉಂಟುಮಾಡುತ್ತದೆ. ನಿನ್ನೆ ದಿನ ಅವರು ವಿಧಾನಸಭಾ ಅಧಿವೇಶನದಲ್ಲಿ ವರ್ತಿಸಿದ ರೀತಿ ನಿಜಕ್ಕೂ ಅಸಹ್ಯಕರ. ಸ್ಪೀಕರ್ ಎಂಬುದನ್ನು ಮರೆತ ಬಿಜೆಪಿ ನಾಯಕರು ಅವರ ಪೀಠದ ಮೇಲೆಯೇ ಹತ್ತಿ, ಬಜೆಟ್ ಪ್ರತಿಯನ್ನು ಹರಿದು ಹಾಕಿ, ಅಗೌರವ ತೋರಿಸಿದ ಹಿನ್ನೆಲೆ ಆರು ತಿಂಗಳುಗಳ ಕಾಲ 18 ಬಿಜೆಪಿ ನಾಯಕರನ್ನು ವಿಧಾನಸಭೆಯಿಂದ ಅಮಾನತು ಮಾಡಲಾಗಿದೆ. ಅವರು ಅಮಾನತು ಆಗಿರುವುದು ಮಾತ್ರವಲ್ಲ ಈ ಸೌಲಭ್ಯಗಳಿಂದಲೂ ಅವರಿಗೆ ಕೋಕ್ ನೀಡಲಾಗಿದೆ.
ಹೌದು, ಆರು ತಿಂಗಳುಗಳ ಕಾಲ ದೊಡ್ಡಣ್ಣ ಗೌಡ ಪಾಟೀಲ್, ಸಿ.ಕೆ.ರಾಮಮೂರ್ತಿ, ಅಶ್ಚತ್ಥ ನಾರಾಯಣ, ಎಸ್.ಆರ್.ವಿಶ್ವನಾಥ್, ಭೈರತಿ ಬಸವರಾಜ್, ಎಂ.ಆರ್.ಪಾಟೀಲ್, ಬಿ.ಸುರೇಶ್ ಗೌಡ, ಉಮನಾಥ್ ಕೋಟ್ಯಾನ್, ಶರಣು ಸಲಗಾರ್, ಶೈಲೇಂದ್ರ ಬೆಲ್ದಾಲ್, ಯಶ್ ಪಾಲ್ ಸುವರ್ಣ, ಹರೀಶ್ ಬಿಪಿ, ಭರತ್ ಶೆಟ್ಟಿ, ಮುನಿರತ್ನ, ಬಸವರಾಜ್ ಮುತ್ತಿಮೋಡ್, ಧೀರಜ್ ಮುನಿರಾಜು, ಡಾ.ಚಂದ್ರು ಲಮಾಣಿ ವಿಧಾನಸಭೆಯಿಂದ ಅಮಾನತುಗೊಂಡವರಾಗಿದ್ದಾರೆ. ಜೊತೆಗೆ ಅವರು ಈ ಎಲ್ಲ ಸೌಲಭ್ಯಗಳಿಂದಲೂ ವಂಚಿತರಾಗುತ್ತಾರೆ.
ಯಾವೆಲ್ಲ ಸವಲತ್ತುಗಳಿಂದ ಸಿಗಲಿದೆ ಕೋಕ್?
* ಮುಂದಿನ ಆರು ತಿಂಗಳು ಕಾಲ ವಿಧಾನಸಭೆ ಪ್ರಾಂಗಣ ಪ್ರವೇಶಕ್ಕೆ ಅವಕಾಶ ಇಲ್ಲ.
* ಅಮಾನತಾದ ಶಾಸಕರಿಗೆ ಯಾವುದೇ ರೀತಿಯಾದ ಟಿಎ ಡಿಎ ನೀಡದಂತೆ ಆದೇಶ ನೀಡಲಾಗಿದೆ.
* ಸ್ಥಾಯಿ ಸಮೀತಿ ಸಭೆಗಳಿಗೂ ಕೂಡ ಅವಕಾಶ ಇಲ್ಲ.
* ಅಮಾನತಿನ ಅವಧಿಯಲ್ಲಿ ಶಾಸಕರು ನೀಡುವ ಸೂಚನೆಗೆ ಮಾನ್ಯತೆ ಇಲ್ಲ
* ಶಾಸಕರ ದಿನದ ಭತ್ಯೆಗೂ ಸಹ ಕೊಕ್ ನೀಡಲಾಗಿದೆ.
* ವಿಧಾನ ಸಭೆಯ ಕಾರ್ಯಕಲಾಪಗಳ ಪಟ್ಟಿಯಲ್ಲಿ ಅವರುಗಳ ಹೆಸರಿನಲ್ಲಿ ಯಾವುದೇ ವಿಷಯವನ್ನು ನಮೂದು ಮಾಡತಕ್ಕದಲ್ಲ.
* ಅಮಾನತಿನ ಅವಧಿಯಲ್ಲಿ ನಡೆಯುವ ಸಮಿತಿಗಳ ಚುನಾವಣೆಯಲ್ಲಿ ಶಾಸಕರು ಮತದಾನ ಮಾಡುವಂತಿಲ್ಲ.
Comments are closed.