Karnataka Bank Recruitment 2025: ಕರ್ನಾಟಕ ಬ್ಯಾಂಕ್‌ನಲ್ಲಿ ಭರ್ಜರಿ ಉದ್ಯೋಗಾವಕಾಶ; ಈ ಕೂಡಲೇ ಅಪ್ಲೈ ಮಾಡಿ!

Karnataka Bank Jobs: ಕರ್ನಾಟಕ ಬ್ಯಾಂಕ್‌ ಉದ್ಯೋಗ ನೇಮಕಾತಿಗಾಗಿ ಅಧಿಸೂಚನೆ ಪ್ರಕಟ ಮಾಡಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದು.

ಉದ್ಯೋಗದ ಹೆಸರು: ತಜ್ಞ ಅಧಿಕಾರಿ
ಒಟ್ಟು ಹದ್ದೆಗಳ ಸಂಖ್ಯೆ; 75
ಹುದ್ದೆಗಳ ವಿವರ:
ಚಾರ್ಟರ್ಡ್‌ ಅಕೌಂಟೆಂಟ್‌, ಕಾನೂನು ಅಧಿಕಾರಿ, ತಜ್ಞ ಅಧಿಕಾರಿ, ಐಟಿ ತಜ್ಞ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದೆ.
ಮಾಸಿಕ ವೇತನ: ರೂ.48,480 ರಿಂದ ರೂ.85,920
ವಿದ್ಯಾರ್ಹತೆ: ಸಿಎ, ಎಲ್‌ಎಲ್‌ಎಂ, ಎಂಬಿಎ, ಇಂಜಿನಿಯರಿಂಗ್‌, ಎಂಸಿಎ, ಎಂಟೆಕ್‌.

ಆಯ್ಕೆ ಪ್ರಕ್ರಿಯೆ: ಅರ್ಹತೆಯ ಆಧಾರದ ಮೇಲೆ ಅಭ್ಯರ್ಥಿಗಳ ಹೆಸರನ್ನು ಶಾರ್ಟ್‌ಲಿಸ್ಟ್‌ ಮಾಡಿ, ಆನ್‌ಲೈನ್‌ ಮೂಲಕ ಸಂದರ್ಶನ ಮಾಡಲಾಗುವುದು.

ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 22-03-2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25-03-2025
ಮೇಲ್ಕಂಡ ಉದ್ಯೋಗಕ್ಕೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮೊದಲು ಒಂದು ವರ್ಷದ ಕಾಲ ಪ್ರೊಬೆಷನರಿ ಅಡಿ ಕೆಲಸ ಮಾಡಬೇಕು. ಈ ಅವಧಿಯಲ್ಲಿ ಕಾರ್ಯಕ್ಷಮತೆ ಪರಿಶೀಲನೆ ಮಾಡಲಾಗುತ್ತದೆ. ಅವಧಿ ಪೂರ್ಣಗೊಂಡ ನಂತರ, ಅವರನ್ನು ಬ್ಯಾಂಕಿನ ಖಾಯಂ ಉದ್ಯೋಗಿಯಾಗಿ ನೇಮಕ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ಮೂರು ವರ್ಷದ ಸೇವಾ ಬಾಂಡ್‌ಗೆ ಸಹಿ ಹಾಕಬೇಕು. ಸಹಿ ಹಾಕಿದ ಮೇಲೆ ಮೂರು ವರ್ಷ ಪೂರ್ಣ ಕೆಲಸ ಮಾಡದಿದ್ದರೆ ಅವರಿಗೆ ದಂಡ ವಿಧಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Comments are closed.