Second Puc Exam: ರಾಜ್ಯದ ದ್ವಿತೀಯ ಪಿಯುಸಿ ಪರೀಕ್ಷೆ-1 ರ ಕೀ ಉತ್ತರ ಬಿಡುಗಡೆ!

Second Puc Exam: ರಾಜ್ಯದ ದ್ವಿತೀಯ ಪಿಯುಸಿ ಪರೀಕ್ಷೆಯ ವಿಷಯಗಳ ಮಾದರಿ ಉತ್ತರಗಳು ಮತ್ತು ಮೌಲ್ಯಮಾಪನ ಯೋಜನೆಯನ್ನು ಕೆಎಸ್‌ಇಎಬಿ ಬಿಡುಗಡೆ ಮಾಡಿದೆ.

2025ನೇ ಸಾಲಿನ ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ 1ರ ಕೀ ಉತ್ತರ ಪತ್ರಿಕೆಯಲ್ಲಿ ಯಾವುದೇ ದೋಷಗಳಿದ್ದಲ್ಲಿ ವಿದ್ಯಾರ್ಥಿಗಳು ತಮ್ಮ ನೋಂದಾಯಿತ ಸಂಖ್ಯೆಯನ್ನು ಬಳಸಿಕೊಂಡು ಆಕ್ಷೇಪಣೆಗಳನ್ನು ಸಲ್ಲಿಸಬಹುದು. ಆಕ್ಷೇಪಣೆಗಳನ್ನು ಸಲ್ಲಿಸುವ ಕೊನೆಯ ದಿನಾಂಕವನ್ನು ಮಂಡಳಿಯು ನಂತರ ಪ್ರಕಟಿಸುತ್ತದೆ.

ಕರ್ನಾಟಕ ದ್ವಿತೀಯ ಪಿಯುಸಿ ಕೀ ಉತ್ತರಗಳನ್ನು ಚೆಕ್ ಮಾಡುವ ರೀತಿ ಕುರಿತು ಮಾಹಿತಿ ಇಲ್ಲಿ ನೀಡಲಾಗಿದೆ;

ಹಂತ 1: ಕೆಎಸ್‌ಇಎಬಿಯ ಅಧಿಕೃತ ವೆಬೊಟ್ಟೆ ಭೇಟಿ ನೀಡಿ: kseab.karnataka.gov.in

ಹಂತ 2: “2025 ರ ದ್ವಿತೀಯ ಪಿಯು ಪರೀಕ್ಷೆ -1 ರ ಮೌಲ್ಯಮಾಪನ ಯೋಜನೆಗೆ ಆಕ್ಷೇಪಣೆ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ” ಎಂದು ಹೇಳುವ ಲಿಂಕ್ ಅನ್ನು ಕ್ಲಿಕ್ ಮಾಡಿ.

ಹಂತ 3: ನಿಮ್ಮನ್ನು dpue-exam.karnataka.gov.in ಗೆ ಮರುನಿರ್ದೇಶಿಸಲಾಗುತ್ತದೆ.

ಹಂತ 4: ಆನ್ಸೆನ್ ಆಕ್ಷೇಪಣೆ ಪ್ರವೇಶ ವಿಭಾಗದಲ್ಲಿ ನಿಮ್ಮ ರಿಜಿಸ್ಟರ್ ಸಂಖ್ಯೆಯನ್ನು ನಮೂದಿಸಿ.

ಹಂತ 5: ಮುಂದುವರಿಯಲು ‘ವೀಕ್ಷಿಸಿ’ ಬಟನ್ ಕ್ಲಿಕ್ ಮಾಡಿ.

Comments are closed.