PM Modi: ಎರಡೂವರೆ ವರ್ಷಗಳಲ್ಲಿ ಮೋದಿ ವಿದೇಶ ಪ್ರವಾಸಕ್ಕೆ 258 ಕೋಟಿ ಖರ್ಚು !!

 

PM Modi: ರಾಜ್ಯದಲ್ಲಿ ವಿಧಾನಸಭಾ ಅಧಿವೇಶನ ನಡೆಯುತ್ತಿದ್ದು ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಹೆಲಿಕಾಪ್ಟರ್ ಪ್ರಯಾಣದ ಖರ್ಚಿಗಾಗಿ ಬರೋಬ್ಬರಿ 31 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ ಎಂಬ ಸುದ್ದಿ ರಾಜ್ಯಾದ್ಯಂತ ಸದ್ದು ಮಾಡಿತ್ತು. ಈ ಬೆನ್ನಲ್ಲೇ ಪ್ರಧಾನಿ ಮೋದಿಯವರು ಬರಿ ಎರಡು ವರ್ಷಗಳಲ್ಲಿ ತಮ್ಮ ವಿದೇಶಿ ಪ್ರವಾಸಕ್ಕೆ ಸುಮಾರು 258 ಕೋಟಿ ಖರ್ಚು ಮಾಡಿದ್ದಾರೆ ಎಂದು ಮಾಹಿತಿ ಬಂದಿದೆ.

 

ಹೌದು, ಲೋಕಸಭಾ ಅಧಿವೇಶನದಲ್ಲಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ (ಎಂಒಎಸ್) ಪಬಿತ್ರಾ ಮಾರ್ಗರಿಟಾ ಅವರು ಸುಮಾರು ಎರಡೂವರೆ ವರ್ಷದಲ್ಲಿ 38 ದೇಶಗಳಿಗೆ ಪ್ರಧಾನಿ ಮೋದಿ ಭೇಟಿ ನೀಡಿದ್ದಾರೆ. ಮೇ 2022 ರಿಂದ ಡಿಸೆಂಬರ್ 2024 ರವರೆಗೆ ಪ್ರಧಾನಿ ನರೇಂದ್ರ ಮೋದಿಯವರ 38 ವಿದೇಶ ಪ್ರವಾಸ ಮಾಡಿದ್ದು ಇದಕ್ಕೆ ಅಂದಾಜು 258 ಕೋಟಿ ಖರ್ಚಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಜೂನ್ 2023 ರಲ್ಲಿ ಪ್ರಧಾನಿಯವರ ಅಮೆರಿಕ ಪ್ರವಾಸದ ಸಮಯದಲ್ಲಿ ಒಂದೇ ಭೇಟಿಗೆ ಅತಿ ಹೆಚ್ಚು ಎನ್ನುವಂತೆ 22 ಕೋಟಿ ಖರ್ಚು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

 

ಅಲ್ಲದೆ ಮೋದಿ ಅವರ ಪೋಲೆಂಡ್‌ ಭೇಟಿಗೆ 10.10 ಕೋಟಿ ಖರ್ಚಾಗಿದ್ದರೆ, ಉಕ್ರೇನ್‌ (2.52 ಕೋಟಿ), ರಷ್ಯಾ (5.34 ಕೋಟಿ), ಇಟಲಿ (14.36 ಕೋಟಿ), ಬ್ರೆಜಿಲ್‌ (5.51 ಕೋಟಿ) ಹಾಗೂ ಗಯಾನಾ (5.45) ದೇಶಗಳಿಗೆ ಪ್ರಮುಖ ವೆಚ್ಚವಾಗಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ 2014 ಕ್ಕಿಂತ ಮೊದಲು ಮಾಡಿದ ಹಿಂದಿನ ವಿದೇಶ ಪ್ರವಾಸಗಳ‌ ವಿವರವನ್ನು ನೋಡುವುದಾದರೆ, 2011ರಲ್ಲಿ ಅಮೆರಿಕ ಭೇಟಿಗೆ 10.74 ಕೋಟಿ, 2013ರಲ್ಲಿ ರಷ್ಯಾ ಭೇಟಿಗೆ 9.95 ಕೋಟಿ, 2011ರಲ್ಲಿ ಫ್ರಾನ್ಸ್‌ ಭೇಟಗೆ 8.33 ಕೋಟಿ ಹಾಗೂ 2013ರಲ್ಲಿ ಜರ್ಮನಿ ಭೇಟಿಗೆ 6.02 ಕೋಟಿ ರೂಪಾಯಿ ಖರ್ಚಾಗಿತ್ತು ಎಂದು ಅವರು ತಿಳಿಸಿದ್ದಾರೆ.

Comments are closed.