Belthangady : ಮರದ ಕೊಂಬೆ ಮುರಿದು ಬಿದ್ದು ಬೈಕ್ ಸವಾರ ಸಾವು

Belthangady : ಬೈಕ್ ನಲ್ಲಿ ಹೋಗುವಾಗ ಮರದ ಕೊಂಬೆ ಒಂದು ಯುವಕನ ಮೇಲೆ ಮುರಿದು ಬಿದ್ದು ಆತ ಸಾವನ್ನಪ್ಪಿರುವ ಘಟನೆ ಬೆಳ್ತಂಗಡಿ(Belthangady) ತಾಲೂಕಿನಲ್ಲಿ ನಡೆದಿದೆ.
ಗೇರುಕಟ್ಟೆ ಜಾರಿಗೆಬೈಲು ಎಂಬಲ್ಲಿ ರಾಜ್ಯ ಹೆದ್ದಾರಿಯಲ್ಲಿ ಬೆಳಾಲು ಗ್ರಾಮದ ನಿವಾಸಿ ಪ್ರವೀಣ್ (25) ಹೋಗುತ್ತಿದ್ದ ಬೈಕ್ ಮೇಲೆ ಮರದ ಗೆಲ್ಲು ಮುರಿದು ಬಿದ್ದ ಪರಿಣಾಮ ಬೈಕ್ ಪ್ರವೀಣ್ ಮೃತಪಟ್ಟ ಘಟನೆ ಗುರುವಾರ ರಾತ್ರಿಯ ವೇಳೆ ಸಂಭವಿಸಿದೆ.
ಮಂಗಳೂರಿನ ಖಾಸಗಿ ಬ್ಯಾಂಕ್ ಒಂದರಲ್ಲಿ ಲೋನ್ ಸೆಕ್ಷನ್ ನಲ್ಲಿ ಕೆಲಸ ಮಾಡುತ್ತಿದ್ದ ಪ್ರವೀಣ್ ಅವರು ಕೆಲಸ ಮುಗಿಸಿಕೊಂಡು ಉಪ್ಪಿನಂಗಡಿ ಗುರುವಾಯನಕೆರೆ ರಾಜ್ಯ ಹೆದ್ದಾರಿಯಲ್ಲಿ ಬರುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡ ಅವರನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ಕೊಂಡೊಯ್ದರೂ ಆ ವೇಳೆಗೆ ಅವರು ಮೃತಪಟ್ಟಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Comments are closed.