Vande Bharat: ಸಧ್ಯದಲ್ಲೇ ಮಂಗಳೂರು- ಮುಂಬೈ ನಡುವೆ ವಂದೇ ಭಾರತ್ ರೈಲು

Vande Bharat: ಮಂಗಳೂರು ಮತ್ತು ವಾಣಿಜ್ಯ ನಗರಿ ಮುಂಬೈ ನಡುವೆ ವಂದೇ ಭಾರತ್ ರೈಲು ಸಂಪರ್ಕ ಬೇಕು ಎಂಬ ಬೇಡಿಕೆ ಬಹಳ ಹಿಂದಿನಿದು. ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಮಂಗಳೂರು-ಮುಂಬೈ ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭಿಸುವ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸದ್ಯ ಮಂಗಳೂರು ನಗರದಿಂದ ಎರಡು ವಂದೇ ಭಾರತ್ ರೈಲುಗಳು ಸಂಚಾರವನ್ನು ನಡೆಸುತ್ತಿದೆ. ಈಗ ಮಂಗಳೂರು-ಮುಂಬೈ ನಡುವೆ ಈ ಮಾದರಿ ರೈಲು ಸಂಚಾರ ಆರಂಭದ ಸೂಚನೆ ಸಿಕ್ಕಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಈ ಕುರಿತು ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಮಾಹಿತಿ ನೀಡಿದ್ದಾರೆ.
ಕೋಟ ಶ್ರೀನಿವಾಸ್ ಪೂಜಾರಿ ಪೋಸ್ಟ್ :
ಸಂಸದ ಕೋಟ ಶ್ರೀನಿವಾಸ ಪೂಜಾರಿ, ‘ಮಂಗಳೂರು-ಮಡಗಾಂವ್ ವಂದೇ ಭಾರತ್ ರೈಲು ರದ್ದಾಗಬಹುದೆಂಬ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ಈ ರೈಲನ್ನು ರದ್ದು ಮಾಡದೇ ಮುಂಬಯಿವರೆಗೆ ಪ್ರತ್ಯೇಕ ಹೊಸ ರೈಲಾಗಿ ಓಡಿಸುವಂತೆ ಸಚಿವರನ್ನು ಕೋರಿದ್ದು, ಸಚಿವರು ತಕ್ಷಣವೇ ಮಂಗಳೂರು-ಮಡಗಾಂವ್ ವಂದೇಭಾರತ್ ರೈಲನ್ನು ರದ್ದು ಮಾಡದಂತೆಯೂ ಮತ್ತು ಅದನ್ನು ಮುಂಬಯಿ ವಿಸ್ತರಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆಯೂ ಅಧಿಕಾರಿಗಳಿಗೆ ಸೂಚಿಸಿದರು’ ಎಂದು ಹೇಳಿದ್ದಾರೆ.
‘ಮಂಗಳೂರು-ಉಡುಪಿ ನಗರಗಳ ಆರ್ಥಿಕ ಆಯಾಮಗಳ ವರದಿಯನ್ನು ಸಚಿವರಿಗೆ ನೀಡಿದ್ದು , ಮುಂಬಯಿ ವಿಸ್ತರಣೆಯ ಅಗತ್ಯ ಹಾಗೂ ಮುಂದೆ ಸ್ಲೀಪರ್ ವಂದೇ ಭಾರತ್ ರೈಲು ಬಿಡುಗಡೆಯಾದಾಗ ಆದ್ಯತೆಯ ಮೇರೆಗೆ ಮಂಗಳೂರು-ಮುಂಬಯಿ ಮಧ್ಯೆ ಅದನ್ನು ಓಡಿಸುವಂತೆಯೂ ಕೋರಲಾಯಿತು. ನಮ್ಮೆಲ್ಲಾ ಕೋರಿಕೆಯನ್ನು ಅತ್ಯಂತ ಪ್ರೀತಿಯಿಂದ ಆಲಿಸಿ ಬೇಡಿಕೆಯನ್ನು ಈಡೇರಿಸುವ ಭರವಸೆ ನೀಡಿದ ಗೌರವಾನ್ವಿತ ಸಚಿವರಿಗೆ ವಂದನೆಗಳು’ ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
Comments are closed.