Chahal: ವಿಚ್ಛೇದನ ಬೆನ್ನಲ್ಲೇ ಹೊಸ ಹುಡುಗಿ ಜೊತೆ ಚಹಾಲ್ ಡೇಟಿಂಗ್ – ಯಾರು ಈ ಬೆಡಗಿ?

Share the Article

Chahaal: ಐಸಿಸಿ 2025ರ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಭಾರತ ಗೆದ್ದು ಭೀಗಿದೆ. ಆದ್ರೆ ಈ ಪಂದ್ಯದಲ್ಲಿ ಅಭಿಮಾನಿಗಳ ಗಮನ ಸೆಳೆದದ್ದು ಚಹಾಲ್ ಜೊತೆ ಕುಳಿತಿದ್ದ ಅಪರಿಚಿತ ಹುಡುಗಿ. ಈ ಅಪರಿಚಿತ ಹುಡುಗಿಯ ಜೊತೆಗಿನ ಚಹಾಲ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹಾಗಿದ್ರೆ ಯಾರು ಈ ಹುಡುಗಿ? ಎಂಬುದು ಹಲವರ ಪ್ರಶ್ನೆಯಾಗಿದೆ.

ಹೌದು, ಚಾಂಪಿಯನ್ಸ್​ ಟ್ರೋಫಿ ಫೈನಲ್​ ಪಂದ್ಯದ ವೇಳೆ ಕ್ರಿಕೆಟಿಗ ಯಜುವೇಂದ್ರ ಚಹಾಲ್ ಪರಿಚಿತ ಯುವತಿಯೊಂದಿಗೆ ಕಾಣಿಸಿಕೊಂಡಿದ್ದರು. ಈ ಹುಡುಗಿಯನ್ನು ಯುಟ್ಯೂಬರ್​​​​ ಆರ್​ಜೆ ಮಹಶ್ವಾ ಎಂದು ಗುರುತಿಸಲಾಗಿದೆ. ಹೀಗಾಗಿ ಚಹಾಲ್​ ಮತ್ತೆ ಡೇಟಿಂಗ್​ ಮಾಡ್ತಿದ್ದಾರೆ ಎಂಬ ಪ್ರಶ್ನೆಗಳು ಎದ್ದಿದ್ದವು.

ಯುಜ್ವೇಂದ್ರ ಚಹಾಲ್ ಅವರೊಂದಿಗೆ ಇರುವ ಹುಡುಗಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಫೋಟೋದಲ್ಲಿ ಇಬ್ಬರೂ ಮಾತನಾಡುತ್ತಿರುವುದು ಕಂಡು ಬಂದಿದೆ. ಅವಳು ಧನಶ್ರೀಗಿಂತ ಸುಂದರವಾಗಿ ಕಾಣುತ್ತಿದ್ದಾಳೆ’ ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ

ಈ ಬೆನ್ನಲ್ಲೆ ಚಹಾಲ್​ ಮಾಜಿ ಪತ್ನಿ ಧನಶ್ರೀ ವರ್ಮಾ ಇನ್​​ಸ್ಟಾಗ್ರಾಂ ಖಾತೆಯಲ್ಲಿ ಅಚ್ಚರಿಯ ಸಂದೇಶ ಹಂಚಿಕೊಂಡಿದ್ದಾರೆ. ಧನಶ್ರೀ ತಮ್ಮ ಇನ್ಸ್​​ಸ್ಟಾ ಸ್ಟೋರಿಯಲ್ಲಿ ಹೆಣ್ಣನ್ನು ದೂಷಿಸುವುದು ಯಾವಾಗಲೂ ಫ್ಯಾಷನ್​ ಆಗಿದೆ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಧನಶ್ರೀ ವರ್ಮಾ ತಮ್ಮನ್ನು ಟೀಕಿಸುತ್ತಿದ್ದವರಿಗೆ ಉತ್ತರ ನೀಡಿದ್ದಾರೆ ಎನ್ನಲಾಗಿದೆ.

Comments are closed.