Auction: ಬರೋಬ್ಬರಿ 7 ಲಕ್ಷ ರೂ. ಮೊತ್ತಕ್ಕೆ ಸೇಲ್ ಆದ ಅಂಡರ್‌ವೇರ್

Auction: ಹರಾಜಿನಲ್ಲಿ ಹಲವು ತರಹದ ವಸ್ತುಗಳ ಮಾರಾಟ ನಡೆಯುತ್ತದೆ. ನೀವು ಸುಮಾರು ವಸ್ತುಗಳನ್ನು ಹರಾಜಿನಲ್ಲಿ ಸೇಲ್ ಆಗಿರುವುದನ್ನು ನೋಡಿರಬಹುದು, ಕೇಳಿರಬಹುದು. ಆದರೆ ಇಲ್ಲೊಂದು ಕಡೆ ಹರಾಜಿನಲ್ಲಿ ಅಂಡರ್‌ವೇರ್ ಒಂದು ಸೇಲ್ ಆಗಿದೆ. ಅದು ಕೂಡಾ ಬರೋಬ್ಬರಿ 7 ಲಕ್ಷ ರೂ.ಗೆ. ಇದೊಂದು ದಾಖಲೆ ಮಟ್ಟದ ಸೇಲ್ ಎಂದೇ ಕರೆಯಬಹುದು. ಆದರೂ ಈ ಅಂಡರ್‌ವೇರ್‌ನಲ್ಲಿ ಅಂತದ್ದೇನಿದೆ ಎಂದು ಇಷ್ಟೊಂದು ದುಬಾರಿ ಬೆಲೆಗೆ ಹರಾಜಾಯಿತು? ಬನ್ನಿ ತಿಳಿಯೋಣ.
ಅಮೆರಿಕದಲ್ಲಿ ಈ ಹರಾಜು ನಡೆದಿದ್ದು ಬರೋಬ್ಬರಿ 7 ಲಕ್ಷಕ್ಕೆ ಸೇಲ್ ಆಗಿದೆ. ಮಾಜಿ ಅಧ್ಯಕ್ಷ ಜಾನ್ ಎಫ್ ಕೆನಡಿ (ಜೆಎಫ್‌ಕೆ) ಧರಿಸಿದ್ದ ಒಳ ಉಡುಪು ಇದಾಗಿದ್ದು 7.5 ಲಕ್ಷ ರೂ. ಗೆ ಮಾರಾಟವಾಗಿದೆ. 1940ರ ದಶಕದ ಈ ಒಳ ಉಡುಪುಗಳ ಮೇಲೆ ʼJack” ಎಂಬ ಕಸೂತಿ ಮಾಡಲಾಗಿದೆ. ಇದು $9,100 ಡಾಲರ್ ಅಂದರೆ 7.5 ಲಕ್ಷ ರೂ.ಗೆ ಮಾರಾಟವಾಗಿದೆ.
ಈ ಹರಾಜಿನಲ್ಲಿ ಫೇಸ್‌ಬುಕ್ ಸಹ-ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್‌ಗೆ ಸೇರಿದ ಹೂಡಿ, ಆಪಲ್ ಸಹ-ಸಂಸ್ಥಾಪಕ ಸ್ಟೀವ್ ಜಾಬ್ಸ್ ಅವರ ಬೋ ಟೈಯನ್ನು ಕೂಡಾ ಹರಾಜಿನಲ್ಲಿಡಲಾಗಿತ್ತು. ಅಂದ ಹಾಗೆ ಜುಕರ್‌ಬರ್ಗಗ ಹೂಡಿ ಬಟ್ಟೆ $15,875 (ಅಂದಾಜು 13 ಲಕ್ಷ ರೂ) ಗೆ ಮಾರಾಟವಾಗಿದೆ.
Comments are closed.