Mangaluru : ಬಸ್ಸಿನಿಂದ ಜಾರಿ ಕಾರಿನ ಮೇಲೆ ಬಿತ್ತು ಮೊಬೈಲ್ – ಕ್ಷಣಾರ್ಧದಲ್ಲಿ ನಡೆದೋದ್ವು ಸರಣಿ ಅಪಘಾತಗಳು!!

Mangaluru : ಬಸ್ಸಿನೊಳಗಿದ್ದ ಪ್ರಯಾಣಿಕರುಬರ ಮೊಬೈಲ್ ಒಂದು ಕೈ ಜಾರಿ ಹಿಂದೆ ಬರುತ್ತಿದ್ದ ಕಾರಿನ ಗಾಜಿನ ಮೇಲೆ ಬಿದ್ದಿದೆ. ಇದು ಸರಣಿ ಅಪಘಾತಗಳಿಗೆ ಕಾರಣವಾಗಿದೆ.
ಹೌದು, ಬಿ ಸಿ.ರೋಡಿನ ತಲಪಾಡಿಯಲ್ಲಿ ಬಸ್ಸಿನಿಂದ ಪ್ರಯಾಣಿಕರೊಬ್ಬರ ಮೊಬೈಲ್ ಬಿ.ಸಿ.ರೋಡು ಕೈಕಂಬ ಚಾವಡಿಗುತ್ತು ಮನೆ ನಿವಾಸಿ ಅನಿತಾ ಮರಿಯ ಲೋಬೊ ಅವರ ಕಾರಿನ ಮೇಲೆ ಬಿದ್ದಿದ್ದು, ಕಾರಿನ ಚಾಲಕಿ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಐದು ಕಾರುಗಳ ಮಧ್ಯೆ ಸರಣಿ ಅಪಘಾತ ಉಂಟಾಗಿದೆ.
ಈ ಘಟನೆಯಲ್ಲಿ ಕಾರುಗಳಿಗೆ ಹಾನಿಯಾಗಿದೆ. ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.