Shivraj Kumar: ‘ರಾಜ್ ಲೀಲಾ ವಿನೋದ’ ಕುರಿತು ಶಿವರಾಜ್ ಕುಮಾರ್ ಗೆ ನೇರ ಪ್ರಶ್ನೆ – ಶಿವಣ್ಣ ಹೇಳಿದ್ದೇನು ಗೊತ್ತಾ?

Share the Article

Shivraj Kumar : ಸಿನಿಮಾ ತಾರೆಯರ ಗುಟ್ಟು ನಂಟುಗಳ ಬಗ್ಗೆ ಹಲವರಿಗೆ ಗೊತ್ತಿದೆ. ಒಮ್ಮೊಮ್ಮೆ ಗಾಸಿಪ್ ಸುದ್ದಿಗಳಾದರೆ ಕೆಲವೊಂದು ಸತ್ಯ ಕೂಡ ಇರುತ್ತದೆ. ಆದರೆ ಯಾವುದನ್ನು ನಂಬುವುದು, ಯಾವುದನ್ನು ಬಿಡುವುದು. ಯಾವುದು ಸತ್ಯ ಯಾವುದೂ ಮಿತ್ಯ ಎಂಬುದೇ ತಿಳಿಯದಂತಾಗುತ್ತದೆ. ಅಂತೀಯ ಕನ್ನಡ ಚಿತ್ರರಂಗದಲ್ಲೂ ಕೂಡ ಬಹಳ ಹಿಂದಿನಿಂದ ಸದ್ದು ಮಾಡಿದ ನಂಟೆಂದರೆ ಅದು ವರನಟ ಡಾ ರಾಜಕುಮಾರ್ ಮತ್ತು ನಟಿ ಲೀಲಾವತಿ ಅವರದ್ದು. ಇದುವರೆಗೂ ಕೂಡ ಉತ್ತರ ದೊರಕದ ಒಂದು ಗಾಸಿಪ್ ಆಗಿ ಕನ್ನಡ ಚಿತ್ರರಂಗದಲ್ಲಿ ಈ ವಿಚಾರ ಉಳಿದುಬಿಟ್ಟಿದೆ. ಈ ಕುರಿತಾಗಿ ಕೆಲವು ಪುಸ್ತಕಗಳು ಕೂಡ ಹೊರಬಂದಿವೆ.

ಹೌದು, ‘ರಾಜ್ ಲೀಲಾ ವಿನೋದ’ ಪುಸ್ತಕ ಕುರಿತಾಗಿ ಎಲ್ಲರಿಗೂ ತಿಳಿದಿದೆ. ಈ ಪುಸ್ತಕ ಬಿಡುಗಡೆ ಆದಾಗ ಹುಟ್ಟುಹಾಕಿದ್ದ ವಿವಾದ ಬಗ್ಗೆ ಬಹುತೇಕ ಎಲ್ಲರಿಗೂ ಗೊತ್ತಿದೆ. ಪತ್ರಕರ್ತ ಹಾಗೂ ಸಾಹಿತಿ ರವಿ ಬೆಳಗೆರೆ (Ravi Belagere) ಅವರು ಬರೆದ ಈ ‘ರಾಜ್ ಲೀಲಾ ವಿನೋದ’ ಪುಸ್ತಕ ಹೊರಬಂದ ಆ ಸಮಯದಲ್ಲಿ ಬಹಳಷ್ಟು ಜನರು ಈ ಬಗ್ಗೆ ದೊಡ್ಡ ವಿವಾದವನ್ನೇ ಸೃಷ್ಟಿಸಿದ್ದರು. ಆದರೆ ಈ ಕುರಿತಾಗಿ ರಾಜ್ ಫ್ಯಾಮಿಲಿಯವರು ಯಾರು ತುಟಿಕ್ ಪಿಟಿಕ್ ಎಂದಿರಲಿಲ್ಲ. ಇದು ಇನ್ನು ಬಾರಿ ಕುತೂಹಲ ಕೆರಳಿಸಿತ್ತು. ಆದರೆ ಈಗ ಅಚ್ಚರಿ ಎಂಬಂತೆ ಶಿವರಾಜ್ ಕುಮಾರ್(Shivraj Kumar) ಅವರಿಗೆ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತಾಗಿ ಪ್ರಶ್ನೆಯೊಂದು ಎದುರಾಗಿದೆ. ಇದಕ್ಕೆ ಶಿವಣ್ಣ ಏನು ಉತ್ತರಿಸಿದ್ದಾರೆ ಗೊತ್ತಾ?

ಶ್ರೀಕಂಠ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು ನೇರವಾಗಿ ಇದನ್ನು ಶಿವರಾಜ್‌ಕುಮಾರ್ ಅವರಿಗೇ ಕೇಳಿದ್ದಾರೆ. ಅಲ್ಲಿದ್ದವರೆಲ್ಲಾ ಒಂದು ಕ್ಷಣ ಕಕ್ಕಾಬಿಕ್ಕಿಯಾಗಿದ್ದಾರೆ. ಆದರೆ, ಕನ್ನಡದ ನಟ ಹಾಗೂ ಕರುನಾಡ ಚಕ್ರವರ್ತಿ ಖ್ಯಾತಿಯ ಶಿವರಾಜ್‌ಕುಮಾರ್ ಮಾತ್ರ ಶಾಂತವಾಗಿ ಈ ಪ್ರಶ್ನೆಗೆ ಉತ್ತರಿಸಿದ್ದಾರೆ. “ನನಗೆ ಆ ಬಗ್ಗೆ ಏನೂ ಗೊತ್ತಿಲ್ಲ. ಗೊತ್ತಿದ್ದರೆ ನಾನು ಮಾತನಾಡಬಹುದಿತ್ತು. ಗೊತ್ತಿಲ್ಲದ ಸಂಗತಿಯನ್ನು ನಾನು ಹೇಗೆ ಮಾತನ್ನಾಡುವುದುಕ್ಕೆ ಆಗುತ್ತೆ.. ? ನನಗೆ ನಿಜವಾಗಿಯೂ ಆ ಬಗ್ಗೆ ಗೊತ್ತಿಲ್ಲ. ಲೀಲಾವತಿಯವರು ಕಂಡಾಗ, ನಮ್ಮನೆಗೆ ಬಂದಾಗ ನಾವು ಅವರ ಕಾಲಿಗೆ ಬಿದ್ದ ನಮಸ್ಕರಿಸಿ ಆಶೀರ್ವಾದ ತಗೋತೀವಿ. ಅವರಿಗೆ ಗೌರವ ಕೊಡ್ತೀವಿ..ಅದು ಬಿಟ್ಟು ಬೇರೆ ಏನೂ ಗೊತ್ತಿಲ್ಲ. ನಮ್ಮಪ್ಪ ಅಮ್ಮ ಕೂಡ ಆ ಬಗ್ಗೆ ನಮಗೆ ಏನೂ ಹೇಳಿಲ್ಲ, ಆ ಬಗ್ಗೆ ಯಾವತ್ತೂ ಮಾತಾಡಿಲ್ಲ.. ನೀವು ಕೇಳಿದ್ರೆ ನಾನು ಏನ್ ಹೇಳ್ಲಿ” ಅಂದಿದ್ದಾರೆ ಶಿವಣ್ಣ.

Comments are closed.