Kumbamela : ಕುಂಭಮೇಳಕ್ಕೆ ಖರ್ಚಾದ ಹಣ ಎಷ್ಟು? ಇದುವರೆಗೂ ಹರಿದು ಬಂದ ಆದಾಯ ಎಷ್ಟು? ಸಿಎಂ ಯೋಗಿ ತೆರೆದಿಟ್ರು ಅಚ್ಚರಿ ಮಾಹಿತಿ

Share the Article

Kumbamela : ವಿಶ್ವದ ಅತಿ ದೊಡ್ಡ ಧಾರ್ಮಿಕ ಉತ್ಸವ 144 ವರ್ಷಕ್ಕೊಮ್ಮೆ ಸಂಭವಿಸುವ ಮಹಾಕುಂಭ ಮೇಳಕ್ಕೆ ಸಾಕ್ಷಿಯಾದ ಪ್ರಯಾಗ್​ರಾಜ್​ಗೆ ದೇಶ-ವಿದೇಶಗಳಿಂದ ಕೋಟ್ಯಂತರ ಭಕ್ತಾಧಿಗಳು ಆಗಮಿಸಿ, ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ. ಜನವರಿ 13ರಿಂದ ಶುರುವಾದ ಮಹಾಕುಂಭ ಇದೇ ಫೆ.26ರಂದು ಅಂತ್ಯವಾಗಲಿದೆ. ಹಾಗಾದರೆ ಈ ಕುಂಭಮೇಳಕ್ಕೆ ಖರ್ಚಾದ ಹಣವೆಷ್ಟು? ಇಲ್ಲಿವರೆಗೂ ಸರ್ಕಾರಕ್ಕೆ ಬಂದ ಆದಾಯವೆಷ್ಟು? ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಡೀಟೇಲ್ಸ್

 

 ಈ ಕುರಿತಾಗಿ ಸ್ವತಹ ಸಿಎಂ ಯೋಗಿ ಆದಿತ್ಯನಾಥ್ ಅವರೇ ಮಾಹಿತಿ ನೀಡಿದ್ದು ‘ಮಹಾಕುಂಭಮೇಳ ಆಯೋಜನೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ 7,500 ಕೋಟಿ ರೂ. ಖರ್ಚು ಮಾಡಿದ್ದು, ಇದರಿಂದಾಗಿ ರಾಜ್ಯಕ್ಕೆ ಮೂರು ಲಕ್ಷ ಕೋಟಿ ರೂ.ಗೂ ಅಧಿಕ ಆದಾಯ ಬರುವ ನಿರೀಕ್ಷೆಯಿದೆ’ ಎಂದು ಹೇಳಿದ್ದಾರೆ.

 

ಅಲ್ಲದೆ ʼ14 ಹೊಸ ಫ್ಲೈಓವರ್‌ಗಳು, 6 ಅಂಡರ್‌ಪಾಸ್‌ಗಳು, 200ಕ್ಕೂ ಹೆಚ್ಚು ಅಗಲವಾದ ರಸ್ತೆಗಳು, ಹೊಸ ಕಾರಿಡಾರ್‌ಗಳು, ವಿಸ್ತೃತ ರೈಲ್ವೆ ನಿಲ್ದಾಣಗಳು ಮತ್ತು ಆಧುನಿಕ ವಿಮಾನ ನಿಲ್ದಾಣ ಟರ್ಮಿನಲ್ ನಿರ್ಮಿಸಲು 7,500 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಹೆಚ್ಚುವರಿಯಾಗಿ ಕುಂಭಮೇಳದ ವ್ಯವಸ್ಥೆಗಳಿಗಾಗಿ 1,500 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಕುಂಭಮೇಳಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳ ಸಂಖ್ಯೆ 60 ಕೋಟಿ ತಲುಪಿದರೆ, ರಾಜ್ಯದ ಜಿಡಿಪಿ 3.25ರಿಂದ 3.5 ಲಕ್ಷ ಕೋಟಿ ರೂ.ಗೆ ಏರಿಕೆಯಾಗಬಹುದು. ಇಲ್ಲಿಯವರೆಗೆ ಮಹಾ ಕುಂಭಮೇಳಕ್ಕೆ ಸುಮಾರು 53 ಕೋಟಿ ಜನರು ಭೇಟಿ ನೀಡಿದ್ದಾರೆʼʼ ಎಂದಿದ್ದಾರೆ.

 

ಇನ್ನು ‘ಕುಂಭಮೇಳದ ಸಂದರ್ಭದಲ್ಲಿ ಅಯೋಧ್ಯೆ, ಪ್ರಯಾಗ್‌ರಾಜ್, ಕಾಶಿ, ಚಿತ್ರಕೂಟ, ಗೋರಖ್‌ಪುರ ಮತ್ತು ನೈಮಿಶಾರಣ್ಯಂಗಳಿಗೆ ತೆರಳುತ್ತಿರುವ ಭಕ್ತಾಧಿಗಳಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗಿದೆ. ಒಂದೇ ವರ್ಷದಲ್ಲಿ ಅಯೋಧ್ಯೆಗೆ ಉಡುಗೊರೆ ಮತ್ತು ದೇಣಿಗೆಗಳ ರೂಪದಲ್ಲಿ 700 ಕೋಟಿ ರೂ. ಹಣ ಸಂಗ್ರಹವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Comments are closed.