K J Geroge: ‘ಗೃಹಲಕ್ಷ್ಮಿ ದುಡ್ಡು ಬರ್ತಿಲ್ಲ’ ಅಂದ್ರೆ ‘ತಿಂಗಳು ತಿಂಗಳು ಕೊಡಲು ಅದು ಸಂಬಳವಲ್ಲ’ ಎಂದ ಸಚಿವ ಜಾರ್ಜ್

K J Geroge: ರಾಜ್ಯದ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರೆಂಟಿಗಳ ಪೈಕಿ ಗೃಹಲಕ್ಷ್ಮಿ ಯೋಜನೆಯೂ ಕೂಡ ಒಂದು. ಈ ಯೋಜನೆಯ ಮೂಲಕ ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಅಂತಹ ಪ್ರತಿ ಮನೆಯ ಯಜಮಾನಿಗು ತಿಂಗಳಿಗೆ 2000 ರೂ ಹಣ ಸಿಗುತ್ತದೆ. ಆದರೆ ಇದೀಗ ಕೆಲವು ತಿಂಗಳಿಂದ ರಾಜ್ಯ ಸರ್ಕಾರ ಯಜಮಾನಿಯರಿಗೆ ಹಣವನ್ನು ನೀಡಿಲ್ಲ.

 

ರಾಜ್ಯ ಸರ್ಕಾರದ ಈ ನಡೆಗೆ ರಾಜ್ಯಾದ್ಯಂತ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರವು ಕೊಟ್ಟ ಭರವಸೆಯನ್ನು ಉಳಿಸಿಕೊಂಡಿಲ್ಲ ಎಂದು ಕಿಡಿ ಕಾರುತ್ತಿದ್ದಾರೆ. ಬಿಜೆಪಿ ಕೂಡ ಆಡಳಿತ ಪಕ್ಷದ ವಿರುದ್ಧ ರೊಚ್ಚಿಗೆದ್ದಿದೆ. ಈ ಕುರಿತಾಗಿ ಗೃಹಲಕ್ಷ್ಮೀ ಹಣ ಬಾರದೇ ಮೂರು ತಿಂಗಳಾಗಿದೆ ಎಂದು ಸಚಿವ ಕೆಜೆ ಜಾರ್ಜ್( K J Geroge) ರನ್ನು ಮಾಧ್ಯಮಗಳು ಪ್ರಶ್ನಿಸಿದಾಗ ತಿಂಗಳು ತಿಂಗಳು ಹಾಕಕ್ಕೆ ಅದೇನು ಸಂಬಳನಾ ಎಂದು ಉಡಾಫೆಯ ಮಾತನಾಡಿದ್ದಾರೆ.

 

ಹೌದು, ಕಳೆದ ಮೂರು ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆಯಡಿ ಸರ್ಕಾರ ಮನೆಯ ಯಜಮಾನಿ ಖಾತೆಗೆ ಹಾಕಬೇಕಾಗಿದ್ದ 2,000 ರೂ. ಹಣ ಹಾಕಿಲ್ಲ. ಅನ್ನಭಾಗ್ಯ ಯೋಜನೆಯ ಹಣವೂ ಜಮೆ ಆಗಿಲ್ಲ. ಈ ಬಗ್ಗೆ ಇಂದು ಸಚಿವ ಕೆಜೆ ಜಾರ್ಜ್ ಗಮನ ಸೆಳೆದಾಗ, ತಿಂಗಳು ತಿಂಗಳು ಹಾಕಕ್ಕೆ ಅದೇನು ಸಂಬಳನಾ? ಹಾಕ್ತಾರೆ ಬಿಡಿ ಎಂದು ಬೇಜವಾಬ್ಧಾರಿಯುತ ಉತ್ತರ ನೀಡಿದ್ದಾರೆ. ಸಚಿವರ ಈ ಉತ್ತರಕ್ಕೆ ಇದೀಗ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

 

ಅಧಿಕಾರಕ್ಕೆ ಬರುವ ಮೊದಲು ಪಂಚ ಗ್ಯಾರೆಂಟಿಗಳನ್ನು ಘಂಟಾಘೋಷವಾಗಿ ಘೋಷಿಸಿದ ಸರ್ಕಾರ ಇದೀಗ ಅಧಿಕಾರದ ಚುಕ್ಕಾಣಿಯನ್ನು ಹಿಡಿದ ಬಳಿಕ ತನ್ನ ಮಾತನ್ನು ತಪ್ಪಿ ನಡೆಯುತ್ತಿದೆ. ಈ ಕುರಿತಾಗಿ ಜನರು ಪ್ರಶ್ನಿಸಿದರೆ ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾದ ಸಚಿವರು ಈ ರೀತಿಯ ಬೇಜವಾಬ್ದಾರಿತನದ ಉತ್ತರವನ್ನು ನೀಡುತ್ತಿರುವುದು ನಿಜಕ್ಕೂ ವಿಷಾದನೀಯ.

Comments are closed.