Kaduru: ಜನರು ನಿಟ್ಟುಸಿರು ಬಿಡುವಂತೆ ಮಾಡಿದ ಮೈಲಾರಲಿಂಗೇಶ್ವರ ಕಾರಣಿಕ !!

Kaduru: ಕಡೂರಿನಲ್ಲಿ ಮೈಲಾರಲಿಂಗೇಶ್ವರ ಕಾರಣಿಕ ನುಡಿದಿದ್ದು ‘ಆಕಾಶ ಹೊಳೆಯಿತೋ.. ಭೂಮಿ ಬೆಳಗೀತಲೇ ಪರಾಕ್…’ ಎಂದು ಅಚ್ಚರಿ ಭವಿಷ್ಯ ನುಡಿದಿದೆ.
ಹೌದು, ಭಾರತ ಹುಣ್ಣಿಮೆ ಪ್ರಯುಕ್ತ ಬುಧವಾರ ಕಡೂರಿನ ಜಿಗಣೆಹಳ್ಳಿಯಲ್ಲಿ ಮೈಲಾರ ಲಿಂಗೇಶ್ವರಸ್ವಾಮಿ ಕಾರ್ಣಿಕೋತ್ಸವ ನಡೆಯಿತು. ವ್ರತ ಕೈಗೊಂಡಿದ್ದ ಕಾರಣಿಕ ನುಡಿಯವ ಗಣಮಗ ಜಿಗಣೇಹಳ್ಳಿ ಮಂಜುನಾಥ್, ವಾದ್ಯವೃಂದದಲ್ಲಿ ವೇದಾನದಿ ತೀರಕ್ಕೆ ಬಂದು ವಿಧಿಗಳನ್ನು ಪೂರೈಸಿ ‘ಆಕಾಶ ಹೊಳೆಯಿತೋ.. ಭೂಮಿ ಬೆಳಗೀತಲೇ ಪರಾಕ್’ ಎಂಬ ಕಾರಣಿಕ ನುಡಿದರು. ಈ ವೇಳೆ ಜನರು ಹರ್ಷೋದ್ಘಾರ ಮಾಡಿದರು.
ಇನ್ನು ಅಲ್ಲಿ ನೆರೆದಿದ್ದವರು ‘ಈ ವರ್ಷ ಸಮೃದ್ಧಿಯಾಗಿ ಮಳೆಯಾಗುತ್ತದೆ. ಭೂಮಿ ಸಮೃದ್ಧ ಹಸಿರಿನಿಂದ ಬೆಳಗುತ್ತದೆ’ ಎಂದು ಕಾರಣಿಕದ ನುಡಿಯನ್ನು ಸೇರಿದ್ದವರು ಅರ್ಥೈಸಿದರು.
Comments are closed.