Bantwala: ಬಾಲಕಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ – ಬೆಂಗಳೂರಲ್ಲಿ ಪತ್ತೆಯಾದ ಬಾಲಕಿ, ಆರೋಪಿಯ ಬಂಧನ

Share the Article

Bantwala: ಆರೋಪಿಯೋರ್ವ ಬಂಟ್ವಾಳದ(Bantwala)ನರಿಕೊಂಬು ಗ್ರಾಮದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲದೆ ಪೊಲೀಸರು ಆಕೆಯನ್ನು ಬೆಂಗಳೂರಿನಲ್ಲಿ ಪತ್ತೆ ಮಾಡಿ, ಆರೋಪಿಯನ್ನು ಬಂಧಿಸಿದ್ದಾರೆ.

ಹೌದು, ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕು ನಿವಾಸಿ ಲೇಬಗೇರಿ ನಿವಾಸಿ ರಾಮು ಗುಳಪ್ಪ ಮಾದರ್‌ ಎಂಬಾತ 2024ರ ಅಕ್ಟೋಬರ್‌ 8ರಂದು ಬಾಲಕಿಯನ್ನು ಆಕೆಯ ಮನೆಯಿಂದ ಅಪಹರಿಸಿದ್ದ. ಬಾಲಕಿಯ ತಂದೆ ನೀಡಿದ ದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇನ್ನು ಆರೋಪಿಯು ಬಾಲಕಿಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಿದ್ದನು. ಪೊಲೀಸ್‌ ಸಿಬಂದಿ ಗಣೇಶ್‌, ನಾಗನಾಥ ಮತ್ತು ರೇವತಿ ಅವರು ಬಾಲಕಿಯನ್ನು ಬೆಂಗಳೂರಿನಲ್ಲಿ ಪತ್ತೆ ಮಾಡಿದ್ದರು. ತನಿಖೆ ವೇಳೆ ಆರೋಪಿಯು ಲೈಂಗಿಕ ಹಲ್ಲೆ ನಡೆಸಿರುವುದು ದೃಢಪಟ್ಟಿದೆ. ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

Comments are closed.