Mokshita Pai: ‘ಐಶ್ವರ್ಯ ಪೈ’ ಇದ್ದವಳು ‘ಮೋಕ್ಷಿತ ಪೈ’ ಆಗಿದ್ದೇಕೆ? ಕೊನೆಗೂ ಅಸಲಿ ವಿಚಾರ ಬಿಚ್ಚಿಟ್ಟ ಮೋಕ್ಷಿತ

Mokshita Pai: ಬಿಗ್ ಬಾಸ್ ಕನ್ನಡ ಸೀಸನ್ 11 ಮುಕ್ತಾಯಗೊಂಡಿದೆ. ಹನುಮಂತು ಅವರು ವಿನ್ನರ್ ಆಗಿ ಹೊರ ಬಂದಿದ್ದಾರೆ. ಇನ್ನು ಮೋಕ್ಷಿತಾ ಪೈ ಬಿಗ್‌ಬಾಸ್‌ನ ಎಲ್ಲಾ ಸ್ಪರ್ಧಿಗಳಲ್ಲಿ ಟ್ರೋಫಿಗೆ ಹತ್ತಿರವಾಗಿದ್ದ ಏಕೈಕ ಮಹಿಳಾ ಸ್ಪರ್ಧಿಯಾಗಿದ್ದಾರೆ. ಅಂದ ಹಾಗೆ ಮೋಕ್ಷಿತ ಅವರು ಬಿಗ್ ಬಾಸ್ ಮನೆಯೊಳಗೆ ಇದ್ದಂತಹ ಸಂದರ್ಭದಲ್ಲಿ ಇತ್ತ ಹೊರಗೆ ಅವರು ಮಕ್ಕಳು ಕಿಡ್ನಾಪ್ ಕೇಸ್ ನಲ್ಲಿ ಅರೆಸ್ಟ್ ಆಗಿದ್ರು, ಅವರ ಹೆಸರು ಮೋಕ್ಷಿತ ಪೈ ಅಲ್ಲ ಐಶ್ವರ್ಯ ಪೈ ನಂತರ ಅದನ್ನು ಬದಲಾಯಿಸಿಕೊಂಡಿದ್ದಾರೆ ಎಂಬ ಆರೋಪ ಬೆಳಕಿಗೆ ಬಂದಿತ್ತು. ಇದೀಗ ಈ ಕುರಿತು ಬಿಗ್ ಬಾಸ್ ನಿಂದ ಹೊರಬಂದ ಮೋಕ್ಷಿತ ಸ್ಪಸ್ಟೀಕರಣ ನೀಡಿದ್ದಾರೆ.

ಹೌದು, ಮೋಕ್ಷಿತಾ ಪೈ(Mokshita Pai)ಬಿಗ್‌ಬಾಸ್‌ ಮನೆಯಿಂದ ಹೊರ ಬಂದ ಬಳಿಕ ಅವರ ಮೇಲೆ ಇದ್ದ ಮಕ್ಕಳ ಕಳ್ಳಿ ಆರೋಪಕ್ಕೆ ತಿರುಗೇಟು ಕೊಟ್ಟಿದ್ದಾರೆ. ಆ ಕೇಸ್‌ಗೂ ನನಗೂ ಸಂಬಂಧವಿಲ್ಲ. ಆ ಪ್ರಕರಣ ಈಗ ಮುಗಿದು ಹೋದ ಅಧ್ಯಾಯ. ಎಲ್ಲರ ಜೀವನದಲ್ಲಿ ಒಂದು ಕಹಿ ಘಟನೆ ನಡೆದಿರುತ್ತದೆ. ಎಲ್ಲರ ಜೀವನದಲ್ಲೂ ತಾವು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಿರುತ್ತಾರೆ. ನನ್ನ ಜೀವನದಲ್ಲೂ ಅಂತಹ ಘಟನೆ ನಡೆದಿದೆ. ಮತ್ತೊಬ್ಬರ ಹೆಸರು ಹಾಳು ಮಾಡುವ ಮುನ್ನ ನೂರು ಬಾರಿ ಯೋಚನೆ ಮಾಡಿ ಎಂದಿದ್ದಾರೆ.

ಹೆಸರು ಬದಲಾಯಿಸಿಕೊಂಡಿದ್ದೇಕೆ?

ನಾನು ಹೆಸರು ಬದಲಿಸಿಕೊಂಡಿರುವುದು ಹೌದು. ಯಾಕೆಂದರೆ ನಮ್ಮ ಅಮ್ಮ ನನಗೆ ಸಂಖ್ಯಾಶಾಸ್ತ್ರದ ( Numerology) ಪ್ರಕಾರ ಹೆಸರು ಇಟ್ಟಿರಲಿಲ್ಲ. ನನ್ನ ಜನ್ಮ ದಿನಾಂಕ ಪ್ರಕಾರ ನನಗೆ ಟ ಹಾಗೂ ಮೊ ಅಕ್ಷರ ಬಂದಿರುತ್ತದೆ. ಅಮ್ಮನಿಗೆ ಟ ಅಕ್ಷರದಲ್ಲಿ ಹೆಸರಿಡಲು ಗೊತ್ತಾಗುವುದಿಲ್ಲ. ಹಾಗಾಗಿ ಐಶ್ವರ್ಯ ಎನ್ನುವ ಹೆಸರು ಇಟ್ಟಿದ್ದರು’. ‘ನಾನು ಪಾರು ಮಾಡುವಾಗ ನ್ಯುಮರಾಲಜಿ ಕೇಳಿದೆವು. ಅವರು ನೀವು ಹೆಸರು ಬದಲಾಯಿಸಿದೆ ಒಳ್ಳೆಯದು. ಅದು ನಿಮಗೆ ಯಶಸ್ಸು ತಂದುಕೊಡುತ್ತದೆ ಅಂತಾ ಹೇಳಿದರು. ಆಗ ಟ ಅಕ್ಷರದಿಂದ ಹೆಸರು ಸಿಗಲಿಲ್ಲ. ಮೊ ಅಕ್ಷರದಿಂದ ಕೇಳಿದಾಗ ಅವರು ಮೋನಿಷಾ ಅಂತಾ ಕೊಟ್ಟಿದ್ದರು. ಆಗ ನಾನು ಮೋನಿಷಾ ಬೇಡ ಮೋಕ್ಷಿತಾ ಬದಲು ಅಂತಾ ಮಾಡಿಕೊಂಡೆವು’ ಎಂದಿದ್ದಾರೆ.

ಅಲ್ಲದೆ ‘ಇನ್ನು ಹೆಸರಿನಲ್ಲಿರುವ ಅಕ್ಷರಗಳನ್ನು ಎಣಿಸಿದಾಗ ಇಷ್ಟೇ ಅಕ್ಷರಗಳು ಬರಬೇಕು ಎಂದು ನ್ಯುಮರಾಲಜಿ ಅಲ್ಲಿ ಇರುತ್ತದೆ. ಮೋಕ್ಷಿತಾ ಹೆಸರಿಗೆ ಅಷ್ಟೇ ಬಂತು. ಅದಾದ ಮೇಲೆ ನನಗೆ ಮರು ನಾಮಕರಣ ಮಾಡಿದರು. ಮುಖ್ಯವಾಗಿ ಹೆಸರು ಬದಲು ಮಾಡಿದ್ದೇ ಇಂಡಸ್ಟ್ರಿಗಾಗಿ. ಮರು ನಾಮಕರಣ ಮಾಡಿದ ಮೇಲೆ ಈ ಹೆಸರು ನನಗೆ ತುಂಬಾ ಯಶಸ್ಸು ತಂದುಕೊಟ್ಟಿತು. ಪಾರು ಅವಕಾಶ ಬಂದ ಮೇಲೆನೇ ನಾನು ಹೆಸರು ಬದಲಿಸಿಕೊಂಡಿದ್ದು. ಈ ಕ್ಷೇತ್ರಕ್ಕೆ ಮೊದಲಿನ ಹೆಸರು ಆಗುತ್ತಾ ಅಂತಾ ನ್ಯುಮರಾಲಜಿ ಅವರನ್ನು ಕೇಳಿ ಬಳಿಕ ಹೆಸರು ಬದಲಿಸಿದ್ದು’ ಎಂದು ಮೋಕ್ಷಿತಾ ಪೈ ಟಿವಿ ೯ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟನೆ ನೀಡಿದರು.

Comments are closed.