Anchor Anushree: ‘ಸರಿಗಮಪ’ ನಿರೂಪಣೆಗೆ ಅನುಶ್ರೀ ಗುಡ್ ಬೈ?

Anchor Anushree: ತಮ್ಮ ವಿಭಿನ್ನವಾದ ನಿರೂಪಣೆಯ ಮೂಲಕ ಆಂಕರ್ ಅನುಶ್ರೀ(Anchor Anushree) ಕನ್ನಡಿಗರ ಮನೆಮಾತಾಗಿದ್ದಾರೆ. ಮುತ್ತಿನಂತೆ ಮಾತುಗಳನ್ನು ಪೋಣಿಸುತ್ತಾ ಜನರನ್ನು ಹುಚ್ಚೆಬ್ಬಿಸುತ್ತಾ, ಮಾತಿನಲ್ಲೇ ಮೋಡಿ ಮಾಡುತ್ತಾ ಇಡೀ ಕಾರ್ಯಕ್ರಮವನ್ನು ರಂಜಿಸುವ ಅನುಶ್ರೀ ಅವರ ಮಾತು ಕೇಳುವುದೇ ಒಂದು ಚೆಂದ. ಅದರಲ್ಲೂ ಅವರು ಜೀ ಕನ್ನಡದಲ್ಲಿ ಪ್ರಸಾರವಾಗುವ ‘ಸರಿಗಮಪ’ ಶೋನಲ್ಲಿ ಮಾಡುವ ನಿರೂಪಣೆ ಕೇಳಲು ಎಲ್ಲರೂ ಕಾತರರಾಗಿರುತ್ತಾರೆ. ಆದರೆ ಈಗ ಅಚ್ಚರಿ ಎಂಬಂತೆ ಅನುಶ್ರೀಯವರು ‘ಸರಿಗಮಪ’ ನಿರೂಪಣೆಗೆ ಗುಡ್ ಬೈ ಹೇಳಿದ್ದಾರೆ ಎಂಬ ಸುದ್ದಿ ಒಂದು ಸದ್ದು ಮಾಡುತ್ತಿದೆ.

ಹೌದು, ನಿರೂಪಣೆ ಅಂದ ತಕ್ಷಣ ನೆನಪಾಗುವುದೇ ಅನುಶ್ರೀ. ಜೀ ಕನ್ನಡದ ರಿಯಾಲಿಟಿ ಶೋನಲ್ಲಿ ಅನುಶ್ರೀ ಇಲ್ಲ ಅಂದರೆ, ಆ ಶೋದಲ್ಲಿ ಮನರಂಜನೆಯೇ ಇರುವುದಿಲ್ಲ ಅನ್ನೋ ಹಾಗಾಗಿದೆ. ಅಲ್ಲದೆ ಸರಿಗಮಪ ಕಾರ್ಯಕ್ರಮ ನೋಡುವುದೇ ಹಲವರು ಅನುಶ್ರೀಯ ನಿರೂಪಣೆ ಕೇಳಲು. ಹಲವು ಸರಿಗಮಪದ ಹಲವು ಸೀಸನ್‌ಗಳನ್ನು ಅನುಶ್ರೀಯೇ ನಡೆಸಿಕೊಂಡು ಬರುತ್ತಿದ್ದಾರೆ. ಆದ್ರೀಗ ಸೋಶಿಯಲ್ ಮೀಡಿಯಾದಲ್ಲಿ ‘ಸರಿಗಮಪ’ ಶೋನಿಂದ ಅನುಶ್ರೀ ಹೊರ ಬಂದಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ.

ಅನುಶ್ರೀ ಸರಿಗಮಪ ನಿಂದ ಹೊರ ಹೋಗಿದ್ದಾರೆ ಎನ್ನಲು ಕಾರಣ :

ಕಳೆದ ವೀಕೆಂಡ್‌ನಲ್ಲಿ ಅನುಶ್ರೀ ಸರಿಗಮಪ ಮ್ಯೂಸಿಕ್ ರಿಯಾಲಿಟಿ ಶೋ ಅನ್ನು ಅನುಶ್ರೀ ನಡೆಸಿಕೊಟ್ಟಿರಲಿಲ್ಲ. ಅವರ ಬದಲಾಗಿ ಮಾಸ್ಟರ್ ಆನಂದ್ ನಿರೂಪಣೆ ಮಾಡಿದ್ದರು. ಈ ವೇಳೆ ಅನುಶ್ರೀ ನಿರೂಪಣೆ ಮಾಡದೇ ಇರುವುದು ಅಚ್ಚರಿ ಮೂಡಿಸಿತ್ತು. ಆದರೆ, ಕಳೆದ ವೀಕೆಂಡ್‌ನಲ್ಲಿ ಅನುಶ್ರೀ ಸರಿಗಮಪ ಶೋನಲ್ಲಿ ಕಾಣಿಸದೇ ಇರುವುದಕ್ಕೆ ಒಂದು ಕಾರಣವಿದೆ. ಆ ವಾರ ಅನುಶ್ರೀ ಬರ್ತ್‌ಡೇ ಇತ್ತು. ಈ ಕಾರಣಕ್ಕೆ ಅವರು ಸರಿಗಮಪ ಕಾರ್ಯಕ್ರಮವನ್ನು ನಡೆಸಿಕೊಟ್ಟಿಲ್ಲ ಅಂತ ವರದಿಯಾಗಿದೆ. ಇನ್ನೊಂದು ಕಡೆ ಅನುಶ್ರೀ ಶೀಘ್ರದಲ್ಲಿಯೇ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ಕಾರಣಕ್ಕೆ ಅವರು ಮದುವೆ ತಯಾರಿಯಲ್ಲಿಯೂ ಬ್ಯುಸಿಯಾಗಿದ್ದಾರಂತೆ. ಇದೆಲ್ಲ ಕಾರಣದಿಂದ ಈ ವಾರ ಸರಿಗಮಪಗೆ ಗೈರಾಗಿದ್ದಾರೆ ಎನ್ನಲಾಗಿದೆ.

ಈ ವಿಚಾರ ಅನುಶ್ರೀ ಫ್ಯಾನ್ಸ್ ಗಂತೂ ತುಂಬಾ ಬೇಸರ ಉಂಟು ಮಾಡಿತ್ತು. ಆದರೆ ಈಗ ಮುಂಬರುವ ಸರಿಗಮಪ ಶೋ ಅನ್ನು ಅನುಶ್ರೀ ಅವರೇ ನಡೆಸಿ ಕೊಟ್ಟಿದ್ದಾರೆ. ಅವರ ನಿರೂಪಣೆಯಲ್ಲಿಯೇ ಶುಭ ನಡೆದಿದೆ. ಇದಕ್ಕೆ ಸಾಕ್ಷಿ ಅಂದ್ರೆ ಜೀ ಕನ್ನಡ ಹಂಚಿಕೊಂಡಿರುವ ಪ್ರೊಮೊ. ಹೌದು, ಬರುವ ಬಾರದ ಸರಿಗಮಪ ಶೋ ನ ಪ್ರೋಮೋವನ್ನು ಈಗಾಗಲೇ ಜೀ ಕನ್ನಡ ತನ್ನ ಮುಖಪುಟದಲ್ಲಿ ಹಂಚಿಕೊಂಡಿದ್ದು ಅದರಲ್ಲಿ ಅನುಶ್ರೀಯೇ ನಿರೂಪಣೆ ಮಾಡಿದ್ದಾರೆ. ಅಲ್ಲದೆ ಕನ್ನಡದ ಹಿರಿಯ ನಟಿಯರಾದ ಸುಧಾರಾಣಿ, ಶ್ರುತಿ ಹಾಗೂ ತಾರಾ ಅವರು ಕೂಡ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಜೊತೆಗೆ ಕ್ಯಾನ್ಸರ್ ಗೆದ್ದು ಬಂದಿರುವ ಶಿವಣ್ಣ ಕೂಡ ಈ ಸಲದ ಸರಿಗಮಪ ಶೋನಲ್ಲಿ ಪಾಲ್ಗೊಂಡಿರುವುದು ವಿಶೇಷ.

Comments are closed.