Bigg boss: ಧನರಾಜ್ ಆಚಾರ್ ನಿಂದ ಬಿಗ್ ಬಾಸ್ ನಲ್ಲಿ ಮಹಾ ಮೋಸ? ವಿಡಿಯೋ ವೈರಲ್
Bigg Boss: ಬಿಗ್ ಬಾಸ್ ಕನ್ನಡ ಸೀಸನ್ 11 ಮುಕ್ತಾಯದ ಹಂತ ತಲುಪಿದೆ. ಪಿನಾಲಿಗೆ ಇನ್ನೂ ಒಂದು ಮೆಟ್ಟಿದಷ್ಟೇ ಬಾಕಿ ಇದೆ. ಈ ನಡುವೆ ಮಿಡ್ ನೈಟ್ ಎಲಿಮಿನೇಷನ್ ನಡೆದಿದ್ದು ಒಬ್ಬ ಸದಸ್ಯ ಮನೆಯಿಂದ ಔಟ್ ಆಗಿದ್ದಾರೆ. ಈ ನಡುವೆ ಬಿಗ್ ಬಾಸ್(Bigg Boss) ಸ್ಪರ್ಧಿಯಾಗಿರುವ ಯೂಟ್ಯೂಬ್ ಸ್ಟಾರ್, ಕರಾವಳಿಯ ಹುಡುಗ ಧನರಾಜ್ ಆಚಾರ್( Dhanraj Achar) ಅವರು ದೊಡ್ಮನೆ ಒಳಗೆ ಮೋಸದಾಟ ಆಡಿದ್ದಾರೆ ಎಂಬ ಸುದ್ದಿ ವೈರಲಾಗಿದೆ.
ಹೌದು, ಟಿಕೆಟ್ ಟು ಫಿನಾಲೆಯನ್ನು ಹಳ್ಳಿ ಹೈದಾ ಹನುಮಂತು ಬಾಚಿಕೊಂಡಿದ್ದಾನೆ ಈಗ ಮಿಡ್ ವೀಕ್ ಎಲಿಮಿನೇಷನ್( mid week elimination) ನಿಂದ ಸೇಫ್ ಆಗುವ ಟಿಕೆಟ್ ಧನರಾಜ್ ಗಿಟ್ಟಿಸಿಕೊಂಡಿದ್ದಾರೆ. ಧನರಾಜ್ ಗೆದ್ದಿರುವುದು ಎಲ್ಲರಿಗೂ ಖುಷಿನೇ ಆಗಿರಬಹುದು ಆದರೆ ಇಲ್ಲಿ ಮೋಸ ಮಾಡಿದ್ದಾರೆ ಎಂಬ ಬೇಸರ ವೀಕ್ಷಕರಿಗೆ ಇದೆ.
View this post on Instagram
ಅಷ್ಟಕ್ಕೂ ದೊಡ್ಮನೆಯಲ್ಲಿ ಆಗಿದ್ದೇನು?
ಮಿಡ್ ವೀಕ್ ಎಲಿಮಿನೇಷನ್ ಇಂದ ಪಾರಾಗಲು ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ಕೊನೆ ಆಟವನ್ನು ನೀಡುತ್ತಾರೆ. ಇದರಲ್ಲಿ ಹಂತ ಹಂತವಾಗಿ ನಡೆಯುವ ಗೇಮ್‌ಗೆ ಪಾಯಿಂಟ್ ನೀಡಲಾಗುತ್ತದೆ. ಕೊನೆ ಹಂತದಲ್ಲಿ ನಡೆದ ಟಾಸ್ಕ್‌ನಲ್ಲಿ ತ್ರಿವಿಕ್ರಮ್, ರಜತ್ ಮತ್ತು ಮೋಕ್ಷಿತಾಗೆ ಧನರಾಜ್ ಸವಾಲ್ ಹಾಕುತ್ತಾರೆ. ಆಶ್ಚರ್ಯ ಏನೆಂದರೆ ಧನರಾಜ್ ಸ್ಮಾರ್ಟ್‌ನೆಸ್‌ನಿಂದ ಕೀ ಪಡೆದು ಪಸಲ್ ಬಾಕ್ಸ್ ಓಪನ್ ಮಾಡಿ ಜೋಡಿಸುತ್ತಾರೆ. ಪಟಾ ಪಟಾ ಅಂತ ಜೋಡಿಸಿದ ಮೇಲೆ ಹನುಮಂತು ಚೆಕ್ ಮಾಡಿದ ಮೇಲೆ ಬೆಲ್ ಹೊಡೆಯುತ್ತಾರೆ. ಅಲ್ಲಿದೆ ಧನರಾಜ್ ಗೆದ್ದಿರುವ ಪಾಯಿಂಟ್ ಹಾಗೂ ಮತ್ತೊಬ್ಬರ ಪಾಯಿಂಟ್ ಕತ್ತಿಕೊಳ್ಳುವ ಅವಕಾಶ ಪಡೆಯುತ್ತಾರೆ. ಈ ಮೂಲಕ ಧನರಾಜ್ ಅವರು ಮಿಡ್ ವೀಕ್ ಎಲಿಮಿನೇಷನ್ ಇಂದ ಪಾರಾಗುತ್ತಾರೆ.
ಆಟ ಆಡಿದ ಧನರಾಜ್ ಕುಳಿತುಕೊಳ್ಳಲು ಹೋಗುತ್ತಾರೆ. ಅಲ್ಲಿ ಉಗ್ರಂ ಮಂಜು ಗೇಮ್ ಹೇಗಿತ್ತು ಎಂದು ಪ್ರಶ್ನೆ ಮಾಡುತ್ತಾರೆ. ಅಯ್ಯೋ ತುಂಬಾ ಸುಲಭವಾಗಿತ್ತು ಎನ್ನುತ್ತಾರೆ. ಬೋರ್ಡ್ ಕಾಣಿಸುತ್ತಿತ್ತಾ ಎಂದು ಕೇಳುತ್ತಾರೆ ಹೌದು ಸ್ವಲ್ಪ ಸ್ವಲ್ಪ ಮೇಲೆ ಭಾಗ ಮಾತ್ರ ಕಾಣಿಸುತ್ತಿತ್ತು ಎನ್ನುತ್ತಾರೆ. ಅಲ್ಲಿಗೆ ಧನರಾಜ್ ಸೇಫ್ ಗೇಮ್ ಆಡಿರುವುದು ಬೆಳಕಿಗೆ ಬರುತ್ತದೆ. ಧನರಾಜ್ ಈಗ ಗ್ರೇ ಏರಿಯಾ ಹುಡುಕಿಕೊಂಡಿದ್ದಾನೆ ಎಂದು ಮಂಜು ಕಾಮೆಂಟ್ ಮಾಡುತ್ತಾರೆ. ಧನರಾಜ್ ಆದ್ಮೇಲೆ ತ್ರಿವಿಕ್ರಮ್‌ನ ಕೇಳುತ್ತಾರೆ ನನಗೆ ಏನೂ ಕಾಣಿಸಿಲ್ಲ ನಾನು ಎಲ್ಲಿನೂ ನೋಡಿಲ್ಲ ಎಂದು ತ್ರಿವಿಕ್ರಮ್ ಹೇಳುತ್ತಾರೆ. ಧನರಾಜ್ ಮುಖ್ಯವಾದ ಟಾಸ್ಕ್‌ನಲ್ಲಿ ಮಾಡಿದ್ದು ಮೋಸ ಅಂದ್ಮೇಲೆ ಯಾಕೆ ಬಿಗ್ ಬಾಸ್ ಸುಮ್ಮನಿದ್ದರು? ಎಂಬುದು ಹಲವು ಜನರ ಪ್ರಶ್ನೆಯಾಗಿದೆ.
Comments are closed.