America: ಟ್ರಂಪ್ ಪ್ರಮಾಣ ವಚನಕ್ಕೆ ಮೋದಿಗಿಲ್ಲ ಆಹ್ವಾನ, ಆದ್ರೆ ಈ ಒಬ್ಬರು ಕೇಂದ್ರ ಸಚಿವರಿಗೆ ಬಂತು ಕರೆಯೋಲೆ !!

America: ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಭಾರತವನ್ನೂ ಆಹ್ವಾನಿಸಲಾಗಿದೆ. ಆದರೆ ಅಚ್ಚರೆ ಏನಂದರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡದೆ ಮೋದಿ ಕ್ಯಾಬಿನೆಟ್ಟಿನ ಈ ಪ್ರಬಲ ಸಚಿವರಿಗೆ ಆಹ್ವಾನ ನೀಡಲಾಗಿದೆ.

 

ಹೌದು, ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭಕ್ಕೆ ಏಷ್ಯಾದಿಂದ ಚೀನಾ ಅಧ್ಯಕ್ಷ ಕ್ಷಿ ಜಿನ್ಪಿಂಗ್ ಗೆ ಮಾತ್ರ ಆಹ್ವಾನ ನೀಡಲಾಗಿದ್ದು, ಪ್ರಧಾನಿ ಮೋದಿಗೆ ಆಹ್ವಾನ ಬಾರದೇ ಇರುವುದು ಅಚ್ಚರಿ ಮೂಡಿಸಿದೆ. ಇನ್ನೂ ಅಚ್ಚರಿಯೇನೆಂದರೆ ಮೋದಿಯನ್ನು ಬಿಟ್ಟು ಅವರ ಸಂಪುಟದ ಸಚಿವರಾದ ಜೈ ಶಂಕರ್ ಅವರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ.

ಯಸ್, ಜೈಶಂಕರ್ ಅವರು 47 ನೇ ಅಧ್ಯಕ್ಷರಾಗಿ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರಮಾಣವಚನ ಸಮಾರಂಭದಲ್ಲಿ ಭಾರತ ಸರ್ಕಾರವನ್ನು ಪ್ರತಿನಿಧಿಸಲಿದ್ದಾರೆ. ಈ ಭೇಟಿಯ ವೇಳೆ ವಿದೇಶಾಂಗ ಸಚಿವರು ಅಮೆರಿಕಕ್ಕೆ ಭೇಟಿ ನೀಡುತ್ತಿರುವ ಇತರ ಕೆಲವು ಗಣ್ಯರನ್ನು ಭೇಟಿಯಾಗಲಿದ್ದಾರೆ.

ಈ ಕುರಿತು ಜೈಶಂಕರ್‌(Jaishankar) ಅವರು ವಾಷಿಂಗ್ಟನ್‌ ಭೇಟಿಯ ಸಂದರ್ಭದಲ್ಲಿ, ಟ್ರಂಪ್‌ ಆಡಳಿತದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದೆ. ‘ಅಮೆರಿಕದ ಆಹ್ವಾನದ ಮೇರೆಗೆ ಜೈಶಂಕರ್ ಅವರು ಡೊನಾಲ್ಡ್‌ ಟ್ರಂಪ್‌ ಅವರ ಪ್ರಮಾಣವಚನ ಸಮಾರಂಬದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಅದೇ ವೇಳೆ, ಅಮೆರಿಕ ಆಡಳಿತದ ಪ್ರತಿನಿಧಿಗಳು, ಇತರ ರಾಷ್ಟ್ರಗಳ ಗಣ್ಯರೊಂದಿಗೆ ಸಭೆ ನಡೆಸಲಿದ್ದಾರೆ’ ಎಂದು ಉಲ್ಲೇಖಿಸಿದೆ.

Comments are closed, but trackbacks and pingbacks are open.