Mangaluru : ಪೆಟ್ರೋಲ್ ಬಂಕ್ ನಲ್ಲಿ ತನ್ನ ಕ್ಯು ಆರ್ ಕೋಡ್ ಇರಿಸಿದ ಆಸಾಮಿ- ದೋಚಿದ್ದು 58 ಲಕ್ಷ, ಗೊತ್ತಾಗಿದ್ದು 2 ವರ್ಷದ ಬಳಿಕ!!
Mangaluru : ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುವ ಸಿಬ್ಬಂದಿ ಒಬ್ಬ, ಬಂಕ್ ನ ಕ್ಯೂ ಆರ್ ಕೋಡ್ ಬದಲು ಮಾಡಿ, ತನ್ನ ವೈಯಕ್ತಿಕ ಬ್ಯಾಂಕ್ ಖಾತೆ ಕ್ಯೂ ಆರ್ ಕೋಡ್ ಇರಿಸಿ ಸುಮಾರು 58 ಲಕ್ಷಕ್ಕೂ ಹೆಚ್ಚು ಹಣ ವಂಚನೆ ಎಸಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಹೌದು, ಮಂಗಳೂರಿನ(Mangaluru)ರಿಲಯನ್ಸ್ ಔಟ್ಲೆಟ್ ಫ್ಯುಯಲ್ ಬಂಕ್ ನಲ್ಲಿ ಈ ಘಟನೆ ನಡೆದಿದ್ದು, ಪೆಟ್ರೋಲ್ ಬಂಕ್ ನಲ್ಲಿ ಗ್ರಾಗಕರು ಪಾವತಿಗಾಗಿ ಬಳಸಲು ಇಟ್ಟಿದ್ದ ಕ್ಯುಆರ್ ಕೋಡ್ ಅನ್ನು ತೆರವು ಮಾಡಿದ್ದ ಆರೋಪಿ ಮಂಗಳೂರಿನ ಬಜ್ಪೆ ನಿವಾಸಿ ಮೋಹನದಾಸ್ ತನ್ನದೇ ಕ್ಯುಆರ್ ಕೋಡ್ ಇಟ್ಟಿದ್ದ. ಪರಿಣಾಮವಾಗಿ ಗ್ರಾಹಕರು ಪಾವತಿ ಮಾಡಿದ ಹಣ ಸಿಬ್ಬಂದಿಯ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗುತ್ತಿತ್ತು. ಈತ ಸುಮಾರು 15 ವರ್ಷಗಳಿಂದ ಪೆಟ್ರೋಲ್ ಬಂಕ್ನಲ್ಲಿ ಕೆಲಸಕ್ಕಿದ್ದ ಎನ್ನಲಾಗಿದೆ. ಬಂಕ್ನ ಹಣಕಾಸು ವ್ಯವಹಾರ, ನಿರ್ವಹಣೆ ಜವಬ್ದಾರಿ ಹೊತ್ತಿದ್ದ ಮೋಹನದಾಸ, 10-03-2020 ರಿಂದ 31-07-2022ರವರೆಗೆ ಕ್ಯುಆರ್ ಕೋಡ್ ಬದಲಿಸಿದ್ದ.
ಅಂದಹಾಗೆ ಕಳೆದ 15 ವರ್ಷದಿಂದ ಮೋಹನ್ ದಾಸ್ ಸೂಪರ್ವೈಸರ್ ಆಗಿ ಫ್ಯುಯಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದ. ಹಣಕಾಸು ನಿರ್ವಹಣೆ ಸಹ ಈತನ ನಿಯಂತ್ರಣದಲ್ಲಿ ಇರುತ್ತಿತ್ತು. ಸಧ್ಯ ಆರೋಪಿ ವಿರುದ್ಧ ರಿಲಯನ್ಸ್ ಕಂಪನಿ ಮ್ಯಾನೇಜರ್ ಸಂತೋಷ್ ಮ್ಯಾಥ್ಯೂ ದೂರು ನೀಡಿದ್ದು, ಮಂಗಳೂರಿನ ಸೈಬರ್ ಕ್ರೈಂ ಮತ್ತು ಎಕನಾಮಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಮೋಹನದಾಸನನ್ನು ಬಂಧಿಸಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
Comments are closed, but trackbacks and pingbacks are open.