Actress Ramya: ʼಹಾಸ್ಟೆಲ್ ಹುಡುಗರುʼ ಸಿನಿಮಾ ವಿವಾದ; ನಟಿ ರಮ್ಯಾ ಕೋರ್ಟ್‌ಗೆ ಹಾಜರು
Actress Ramya: ನಟಿ ರಮ್ಯಾ ಅವರು ಕೋರ್ಟ್‌ಗೆ ಹಾಜರಾಗಿದ್ದಾರೆ. ಹೌದು, ʼಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆʼ ಎಂಬ ಸಿನಿಮಾಗೆ ಸಂಬಂಧಪಟ್ಟಂತೆ ಬೆಂಗಳೂರು ವಾಣಿಜ್ಯ ನ್ಯಾಯಾಲಯಕ್ಕೆ ನಟಿ ರಮ್ಯಾ ಹಾಜರಾಗಿದ್ದಾರೆ.
ಚಿತ್ರದಲ್ಲಿ ನನ್ನ ದೃಶ್ಯವನ್ನು ಅನುಮತಿ ಇಲ್ಲದೇ ಬಳಸಲಾಗಿದೆ ಎಂದು ಹಾಸ್ಟೆಲ್ ಹುಡುಗರಿಗೆ ನಟಿ ರಮ್ಯಾ ನೋಟಿಸ್ ನೀಡಿದ್ದು, ಅಷ್ಟು ಮಾತ್ರವಲ್ಲದೇ ಚಿತ್ರಪ್ರದರ್ಶನಕ್ಕೆ ತಡೆ ನೀಡಬೇಕು ಎಂದು ನಟಿ ರಮ್ಯಾ ಕಮರ್ಷಿಯಲ್ ಕೋರ್ಟ್ ಮೆಟ್ಟಿಲೇರಿದ್ದರು.
ನಟಿ ರಮ್ಯಾ ಅವರು ಈ ಚಿತ್ರಗಳಲ್ಲಿ ನನ್ನ ಫೋಟೋ, ಇತರ ಕಂಟೆಂಟ್‌ಗಳನ್ನು ಬಳಕೆ ಮಾಡಿದ್ದು, ಇದನ್ನು ತೆಗೆಯಬೇಕು ಎಂದು ಹೇಳಿದ್ದರು. ಜೊತೆಗೆ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂಬುವುದನ್ನು ಕೂಡಾ ನೋಟಿಸ್‌ನಲ್ಲಿ ಒತ್ತಾಯ ಮಾಡಿದ್ದರು. ನನಗಾಗಿರುವ ನಷ್ಟವನ್ನು ತುಂಬಿಕೊಡಬೇಕು ಎಂದು ನಟಿ ರಮ್ಯಾ ಅವರು ಕಮರ್ಷಿಯಲ್ ಕೋರ್ಟ್ ಮೂಲಕ ನೋಟಿಸ್ ನೀಡಿದ್ದರು.
Comments are closed, but trackbacks and pingbacks are open.