Tumakuru : ಯಪ್ಪಾ… ಬರಿಗೈಲಿ ಚಿರತೆ ಬಾಲ ಹಿಡಿದು ಬೋನಿಗೆ ಹಾಕಿದ ಯುವಕ, ಅರಣ್ಯಾಧಿಕಾರಿಗಳೇ ಶಾಕ್ – ವಿಡಿಯೋ ವೈರಲ್!!

Tumakuru : ಅರಣ್ಯ ಇಲಾಖೆ ಸಿಬ್ಬಂದಿಗಳ ಕೈಯಿಂದ ತಪ್ಪಿಸಿಕೊಂಡು ಓಡಿ ಹೋಗುತ್ತಿದ್ದ ಚಿರತೆಯನ್ನು ಯುವಕನೊಬ್ಬ ಅದರ ಬಾಲದಿಂದ ಹಿಡಿದು ಬೋನಿಗೆ ಹಾಕಿರುವ ಘಟನೆ ತುಮಕೂರಿನಲ್ಲಿ ನಡೆದಿದ್ದು ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

 

 

View this post on Instagram

 

A post shared by PUBLiC TV (@publictv)

ಹೌದು, ತುಮಕೂರು(Tumakuru) ಜಿಲ್ಲೆಯ ತಿಪಟೂರು ತಾಲೂಕಿನ ರಂಗಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರಂಗಾಪುರ ಗ್ರಾಮದ ಸುತ್ತಮುತ್ತ ಇತ್ತೀಚೆಗೆ ಚಿರತೆ ಕಾಣಿಕೊಳ್ಳುತ್ತಿದ್ದು, ಇದರಿಂದ ಹಲವು ದಿನಗಳಿಂದ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿತ್ತು. ಅಲ್ಲದೆ ಇಂದು ಪುರಲೇಹಳ್ಳಿ ರಸ್ತೆಯಲ್ಲಿರುವ ಕುಮಾರ್ ಎಂಬುವವರ ಮನೆಯ ಬಳಿ ಚಿರತೆ ಕಾಣಿಸಿಕೊಂಡಿದೆ. ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ತಕ್ಷಣ ಚಿರತೆಯನ್ನು ಸೆರೆ ಹಿಡಿಯಲು ಸಕಲ ಸಲಕರಣೆಗಳೊಂದಿಗೆ ಸ್ಥಳಕ್ಕೆ ಆಗಮಿಸಿದ್ದಾರೆ. ಸಿಬ್ಬಂದಿ ಬಲೆ ಬಿಟ್ಟು ಚಿರತೆಯನ್ನು ಸೆರೆ ಹಿಡಿಯಲು ಮುಂದಾದರೂ ಯಾವುದೇ ಪ್ರಯೋಜನ ಆಗಲಿಲ್ಲ. ಚಿರತೆಯನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ವಿಫಲವಾಗಿ ಕೈಚೆಲ್ಲಿದ್ದರು.

ಈ ವೇಳೆ ಕೊನೆಗೆ ಇದರಿಂದ ರೋಸಿ ಹೋಗಿದ್ದ ಇದೇ ಗ್ರಾಮದ ಆನಂದ್‌ ಎಂಬುವರು ಚಿರತೆಯನ್ನು ಹಿಡಿಯಲು ಫೀಲ್ಡಿಗಿಳಿದಿದ್ದ. ಚಿರತೆ ಬಂದ ಕೂಡಲೇ ನೇರವಾಗಿ ಅಖಾಡಕ್ಕಿಳಿದು ಜಸ್ಟ್‌ ಚಿರತೆಯ ಬಾಲ ಹಿಡಿದು ಬೋನಿಗೆ ಹಾಕೇಬಿಟ್ಟಿದ್ದಾನೆ. ನೋಡನೋಡುತ್ತಿದ್ದಂತೆ ಬಾಲದಿಂದಲೇ ಚಿರತೆ ಸೆರೆ ಹಿಡಿದ ಯುವಕನ ಧೈರ್ಯಕ್ಕೆ ಖುದ್ದು ಅರಣ್ಯಾಧಿಕಾರಿಗಳೇ ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ. ಕೊನೆಗೆ ಈತನ ಶೌರ್ಯಕ್ಕೆ ಮೆಚ್ಚಿ ಎಲ್ಲರೂ ಶಹಬ್ಬಾಸ್‌ಗಿರಿಯೂ ಕೊಟ್ಟಿದ್ದಾರೆ. ಚಿರತೆ ಸೆರೆಯಾಗಿದ್ದರಿಂದ ಅಕ್ಕಪಕ್ಕದ ಗ್ರಾಮಸ್ಥರೆಲ್ಲರೂ ನಿಟ್ಟುಸಿರು ಬಿಟ್ಟಿದ್ದು, ಧೈರ್ಯಶಾಲಿ ಆನಂದ್‌ ಅವರನ್ನು ತಲೆಮೇಲೆ ಹೊತ್ತು ಮೆರೆಸಿದ್ದಾರೆ. ಊರಿಗೊಬ್ಬ ಆನಂದ ಇದ್ದರೆ ಸಾಕು, ಚಿರತೆ ಬಂದರೂ ಭಯವಿಲ್ಲ ಎಂದು ಗ್ರಾಮಸ್ಥರೆಲ್ಲ ಕೊಂಡಾಡಿದ್ದಾರೆ. ಇದರ ವಿಡಿಯೋ ಬಾರೀ ವೈರಲ್‌ ಆಗುತ್ತಿದ್ದು, ಯುವಕನ ಧೈರ್ಯಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳೇ ಶಾಕ್ ಆಗಿದ್ದಾರೆ.

Comments are closed, but trackbacks and pingbacks are open.