Central Government : ಅಡಿಕೆ ಬೆಳೆಗಾರರಿಗೆ ಊಹಿಸದಂತಹ ಶಾಕ್ ನೀಡಿದ ಕೇಂದ್ರ ಸರ್ಕಾರ !!
Central Government : ಅಡಿಕೆ ಕ್ಯಾನ್ಸರ್‌ಕಾರಕ ಎಂಬ ವಿಶ್ವಸಂಸ್ಥೆಯ ಅಂಗಸಂಸ್ಥೆಯ ವರದಿಯ ಬೆನ್ನಲ್ಲೇ ಇದೀಗ ಕೇಂದ್ರ ಸರ್ಕಾರ ಅಡಿಕೆ ಬೆಳೆಗಾರರಿಗೆ ದೊಡ್ಡ ಅ ಘಾತವನ್ನು ಉಂಟುಮಾಡಿದೆ.
ಹೌದು, ಅಡಿಕೆ ಮಂಡಳಿ ರಚಿಸಬೇಕೆಂಬುದು ನಾಡಿನ ಅಡಿಕೆ ಬೆಳೆಗಾರರ ಆಸೆ. ಈ ಕುರಿತಾಗಿ ಅನೇಕ ಅಡಿಕೆ ಬೆಳೆಗಾರರ ಸಂಘಟನೆಗಳು ಸರ್ಕಾರಕ್ಕೆ ಮನವಿ ಮಾಡಿದ್ದವು. ಆದರೀಗ ಮಂಡಳಿ ರಚನೆಯ ಬೇಡಿಕೆಯನ್ನು ಕೇಂದ್ರ ಸರ್ಕಾರ ಸಾರಾಸಗಟಾಗಿ ತಳ್ಳಿಹಾಕಿದೆ. ಇದು ಈಗಾಗಲೇ ನಿಷೇಧದ ಆತಂಕದಲ್ಲಿರುವ ಅಡಿಕೆ ಬೆಳೆಗಾರರಿಗೆ ಕೇಂದ್ರ ಬಿಜೆಪಿ ಸರ್ಕಾರದ ಈ ನಿರ್ಧಾರ ಗಾಯದ ಮೇಲೆ ಬರೆ ಎಳೆದಂತಾಗಿದೆ.
ವಿಶ್ವ ಮಟ್ಟದಲ್ಲಿ ಅಡಿಕೆ ಬೆಳೆಯಲ್ಲಿ ಭಾರತವೇ ಮುಂಚೂಣಿಯಲ್ಲಿರುವ ರಾಷ್ಟ್ರ.ಜಾಗತಿಕವಾಗಿ ಉತ್ಪಾದನೆಯಾಗುವ ಒಟ್ಟು ಅಡಿಕೆಯಲ್ಲಿ ಭಾರತದ ಪಾಲು ಶೇ.55ಕ್ಕಿಂತ ಹೆಚ್ಚಿದೆ. ಇನ್ನು ದೇಶದಲ್ಲೇ ಅತಿ ಹೆಚ್ಚು ಅಡಿಕೆ ಉತ್ಪಾದಕ ರಾಜ್ಯ ಕರ್ನಾಟಕ. ದೇಶದ ಒಟ್ಟು ಉತ್ಪಾದನೆಯ ಶೇ.52ರಷ್ಟು ಉತ್ಪಾದನೆ ಮೂಲಕ ರಾಜ್ಯ ಮೊದಲ ಸ್ಥಾನದಲ್ಲಿದೆ. ಇಷ್ಟು ವ್ಯಾಪಕತೆ ಮತ್ತು ಆರ್ಥಿಕ ಮಹತ್ವ ಹೊಂದಿರುವ ಅಡಿಕೆ ಬೆಳೆ ಇದೀಗ ಕ್ಯಾನ್ಸರ್‌ಕಾರಕ ಎಂಬ ಹಣೆಪಟ್ಟಿ ಹೊತ್ತು ನಿಷೇಧ ಭೀತಿ ಎದುರಿಸುತ್ತಿದೆ. ಅಲ್ಲದೆ ಎಲೆಚುಕ್ಕೆ ಸೇರಿದಂತೆ ಹತ್ತಾರು ರೋಗ, ಗುಟ್ಕಾ ಕಂಪನಿ, ಮಂಡಿ ಮಾಲೀಕರ ಏಕಸ್ವಾಮ್ಯದ ಮಾರುಕಟ್ಟೆಯ ಏರಿಳಿತ, ವ್ಯಾಪಕ ಬೆಳೆ ವಿಸ್ತರಣೆ ಸೇರಿದಂತೆ ಹತ್ತು ಹಲವು ಬಿಕ್ಕಟ್ಟುಗಳನ್ನು ಮೈ ಮೇಲೆ ಎಳೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಅಡಿಕೆಗೂ ರಾಷ್ಟ್ರಮಟ್ಟದಲ್ಲಿ ಒಂದು ಮಂಡಳಿ ಬೇಕು ಎಂಬುದು ಈ ಹಿಂದಿನ ರಾಜ್ಯ ಸರ್ಕಾರಗಳ ಬೇಡಿಕೆಯಾಗಿತ್ತು. ಆದರೆ ಇದೀಗ ಸರ್ಕಾರ ಇದನ್ನು ತಳ್ಳಿ ಹಾಕಿದೆ.
ಅಂದಹಾಗೆ ಬಾಗಲಕೋಟೆ ತೋಟಗಾರಿಕಾ ವಿಜ್ಞಾನ ವಿಶ್ವವಿದ್ಯಾಲಯದ ಅಂದಿನ ಕುಲಪತಿಗಳಾಗಿದ್ದ ಡಾ ಡಿ ಎಲ್ ಮಹೇಶ್ವರ್ ಅವರ ನೇತೃತ್ವದಲ್ಲಿ 2016-17ರಲ್ಲಿ ಒಂದು ಸಮಿತಿ ನೇಮಿಸಲಾಗಿತ್ತು. ಆ ಸಮಿತಿಯ ವರದಿಯನ್ನು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪ್ಲಾಂಟೇಷನ್ ಮ್ಯಾನೇಜ್ಮೆಂಟ್ ಮೂಲಕ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಕೇಂದ್ರ ಸರ್ಕಾರದ ಅಡಿಯಲ್ಲಿ ಅಡಿಕೆ ಮಂಡಳಿ(areca board) ರಚನೆ ಮಾಡಬೇಕಾದ ಅಗತ್ಯವೇನಿದೆ? ಮಂಡಳಿಯ ಸ್ವರೂಪ ಮತ್ತು ಹೊಣೆಗಾರಿಕೆಗಳೇನು? ಅದರ ಸ್ಥಾಪನೆಯ ಕರ್ಚುವೆಚ್ಚಗಳು, ಅದರ ಕಾರ್ಯನಿರ್ವಹಣೆಯ ವಿಧಿವಿಧಾನಗಳೇನು? ಎಂಬ ಎಲ್ಲಾ ವಿವರಗಳನ್ನು ಒಳಗೊಂಡ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಇದೀಗ ಪ್ರಸ್ತಾವನೆ ಸಲ್ಲಿಸಿದ ಏಳು ವರ್ಷಗಳ ಬಳಿಕ ಪತ್ರ ಬರೆದಿರುವ ಕೇಂದ್ರ ಸರ್ಕಾರ, ಅಡಿಕೆ ಮಂಡಳಿಯ ಅಗತ್ಯವೇ ಇಲ್ಲ ಎಂದು ಸಾರಾಸಗಟಾಗಿ ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ತಳ್ಳಿಹಾಕಿದೆ.
Comments are closed, but trackbacks and pingbacks are open.