Divya Gowda: ಬಿಗ್ ಬಾಸ್ ಸ್ಪರ್ಧಿ ಭವ್ಯಾ ಗೌಡ ಅಕ್ಕ ದಿವ್ಯಾ ಗೌಡ ಅವರ ವಯಸ್ಸೆಷ್ಟು ? ಅವರು ಮಾಡೋ ಕೆಲಸವೇನು?

Divya gowda: ಬಿಗ್ ಬಾಸ್ ಕನ್ನಡ ಸೀಸನ್ ಹನ್ನೊಂದರಲ್ಲಿ ಭವ್ಯ ಗೌಡ ಅವರು ಸಖತ್ ಆಗಿ ಆಟ ಆಡುತ್ತಿದ್ದಾರೆ. ಪ್ರಬಲ ಸ್ಪರ್ಧಿಗಳ ನಡುವೆ ಎಲ್ಲರಿಗೂ ಕಾಂಪಿಟೇಟರ್ ಅನಿಸಿಕೊಂಡಿದ್ದಾರೆ. ಅಂದಹಾಗೆ ಈ ವಾರ ಬಿಗ್ ಬಾಸ್ ಮನೆಯಲ್ಲಿ ಫ್ಯಾಮಿಲಿ ರೌಂಡ್ ಏರ್ಪಡಿಸಲಾಗಿತ್ತು. ಈ ವೇಳೆ ಭವ್ಯ ಗೌಡ ಅವರ ಅಕ್ಕ, ಅಕ್ಕನ ಮಗಳು ಹಾಗೂ ತಾಯಿ ಆಗಮಿಸಿದ್ದರು. ಭವ್ಯ ಗೌಡ ಅವರ ಅಕ್ಕ ದಿವ್ಯ ಗೌಡ ಅವರು ಮನೆಗೆ ಕಾಲಿಡುತ್ತಿದ್ದಂತೆ ಪುರುಷ ಸ್ಪರ್ಧಿಗಳೆಲ್ಲರೂ ಅವರ ಹಿಂದೆ ಬಿದ್ದಿದ್ದರು. ಅವರನ್ನು ರೇಗಿಸುತ್ತಾ ಫ್ಲರ್ಟ್ ಮಾಡುತ್ತಿದ್ದರು. ಜೊತೆಗೆ ಕರ್ನಾಟಕದ ಜನತೆ ಕೂಡ ದಿವ್ಯಾ ಗೌಡ ಅವರು ಇಷ್ಟವಾಗಿದ್ದರು. ಇದರ ಬೆನ್ನಲ್ಲೇ ದಿವ್ಯ ಗೌಡ(Divya Gowda) ಅವರು ಏನು ಕೆಲಸ ಮಾಡುತ್ತಾರೆ? ಅವರ ವಯಸ್ಸೆಷ್ಟು? ಎಂಬುದು ಹಲವರ ಕುತೂಹಲ.

 

ಗೀತಾ ಸೀರಿಯಲ್‌ ಖ್ಯಾತಿಯ ಭವ್ಯಾ ಅವರ ಅಕ್ಕನ ಹೆಸರು ದಿವ್ಯಾ ಗೌಡ. ವೃತ್ತಿಯಲ್ಲಿ ಪ್ರೊಫೆಶನಲ್ ಮೇಕಪ್ ಆರ್ಟಿಸ್ಟ್ ಆಗಿರುವ ದಿವ್ಯಾ ಅವರಿಗೀಗ 28 ವರ್ಷ ವಯಸ್ಸು. ಪ್ರತ್ಯೇಕ ಕೋರ್ಸ್‌ ಮಾಡಿ ಸರ್ಟಿಫೈಡ್ ಮೇಕಪ್ ಆರ್ಟಿಸ್ಟ್ ಎಂದೆನಿಸಿಕೊಂಡಿದ್ದಾರೆ. ಜೊತೆಗೆ ಬ್ರೈಡಲ್ ಮೇಕಪ್‌ನಲ್ಲಿ ಪರಿಣತಿ ಹೊಂದಿದ್ದಾರೆ. ಭವ್ಯಾ ಅವರಿಗೀಗ 25 ವರ್ಷ ವಯಸ್ಸಾಗಿದೆ.

ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್ ಹಲವು ಸೆಲೆಬ್ರಿಟಿಗಳಿಗೆ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದಾರೆ. ನಟಿ ಶರ್ಮಿಳಾ ಮಾಂಡ್ರೆ, ಗೋಲ್ಡನ್ ಕ್ವೀನ್ ಅಮೂಲ್ಯ, ನಟಿ ಕಾವ್ಯ ಶೆಟ್ಟಿ, ನಟಿ ಶಾನ್ವಿ ಶ್ರೀವಾಸ್ತವ ಸೇರಿದಂತೆ ಹಲವು ತಾರೆಯರಿಗೆ ಬಣ್ಣಹಚ್ಚಿದ್ದಾರೆ.

Comments are closed, but trackbacks and pingbacks are open.