EPFO: ಕೇಂದ್ರದಿಂದ ಏಕೀಕೃತ ಪಿಂಚಣಿ ವ್ಯವಸ್ಥೆಯನ್ನು ಜಾರಿ !!
EPFO: ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ನೌಕರರ ಪಿಂಚಣಿ ಯೋಜನೆ (EPS) ಗೆ ಸಂಬಂಧಿಸಿದ ಪಿಂಚಣಿದಾರರಿಗೆ ಹೊಸ ವರ್ಷದ ಆದಿಯಲ್ಲೇ ದೊಡ್ಡ ಸಿಹಿ ಸುದ್ದಿ ನೀಡಿದೆ. ಇದರ ಅನುಸಾರ ಪಿಂಚಣಿದಾರರು ದೇಶದ ಯಾವುದೇ ಬ್ಯಾಂಕ್, ಶಾಖೆ ಅಥವಾ ಸ್ಥಳದಿಂದ ತಮ್ಮ ಪಿಂಚಣಿಯನ್ನು ಪಡೆಯಬಹುದು.
ಹೌದು, ಕೇಂದ್ರ ಕಾರ್ಮಿಕ ಸಚಿವಾಲಯವು ಏಕೀಕೃತ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಇನ್ಮುಂದೆ ಪಿಂಚಣಿದಾರರು ದೇಶದ ಯಾವುದೇ ರಾಜ್ಯದ, ಯಾವುದೇ ಬ್ಯಾಂಕಿನ ಶಾಖೆಯಲ್ಲಿ ತಮ್ಮ ಪಿಂಚಣಿ ಪಡೆದುಕೊಳ್ಳಬಹುದಾಗಿದೆ. ನಿವೃತ್ತಿಯ ನಂತರ ತಮ್ಮ ಊರಿಗೆ ಹೋಗುವ ಜನರಿಗೆ ಇದು ದೊಡ್ಡ ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಕೆಲವು ದಿನಗಳ ಹಿಂದೆ, ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಾಂಡವಿಯಾ ಮತ್ತು EPF ನ ಕೇಂದ್ರ ಟ್ರಸ್ಟಿಗಳ ಮಂಡಳಿಯ ಅಧ್ಯಕ್ಷರು 1995 ರ ನೌಕರರ ಪಿಂಚಣಿ ಯೋಜನೆಗಾಗಿ ಕೇಂದ್ರೀಕೃತ ಪಿಂಚಣಿ ಪಾವತಿ ವ್ಯವಸ್ಥೆ (CPPS) ಪ್ರಸ್ತಾಪಕ್ಕೆ ಅನುಮೋದನೆ ನೀಡಿದರು. ಹೊಸ ವರ್ಷದಿಂದ ನೌಕರರಿಗೆ ಇದು ಲಭ್ಯವಾಗಲಿದೆ. CPPS ಜಾರಿಯಿಂದ ಸುಮಾರು 78 ಲಕ್ಷ ಪಿಂಚಣಿದಾರರಿಗೆ ಲಾಭವಾಗಲಿದೆ.
ಇದುವರೆಗೂ ಯಾವ ವ್ಯವಸ್ಥೆ ಇತ್ತು?
ಇದಕ್ಕೂ ಮುನ್ನ 1995ರ ಪಿಂಚಣಿ ಯೋಜನೆ ಜಾರಿಯಲ್ಲಿತ್ತು. ಅದರ ಪ್ರಕಾರ, ವಿಕೇಂದ್ರೀಕೃತ ವ್ಯವಸ್ಥೆಯಲ್ಲಿ ಪ್ರತಿ ವಲಯ ಅಥವಾ ಪ್ರಾಂತ್ಯದ ಇಪಿಎಫ್‌ಒ ಕಚೇರಿಗಳು 3-4 ಬ್ಯಾಂಕ್‌ಗಳೊಂದಿಗೆ ಪ್ರತ್ಯೇಕ ಒಪ್ಪಂದ ಮಾಡಿಕೊಂಡಿದ್ದು, ಅವುಗಳ ಮೂಲಕವೇ ಹಣ ಪಡೆಯಬೇಕಿತ್ತು
EPS ಪಿಂಚಣಿಗೆ ಅರ್ಹತೆ
*ನೌಕರರು EPFO ನ ಸದಸ್ಯರಾಗಿರಬೇಕು ಮತ್ತು 10 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿರಬೇಕು.
*ಅವರು 58 ವರ್ಷ ವಯಸ್ಸನ್ನು ತಲುಪಿರಬೇಕು.
*50 ವರ್ಷ ಪೂರ್ಣಗೊಂಡ ನಂತರ ಕಡಿಮೆ ಪಾವತಿಯಲ್ಲಿ ಅವರು ತಮ್ಮ EPS ಅನ್ನು ಹಿಂಪಡೆಯಬಹುದು.
*ಅವರು ತಮ್ಮ ಪಿಂಚಣಿಯನ್ನು ಎರಡು ವರ್ಷಗಳವರೆಗೆ (60 ವರ್ಷದವರೆಗೆ) ವಿಸ್ತರಿಸಬಹುದು.
*ಇದರ ನಂತರ, ಅವರಿಗೆ ಪ್ರತಿ ವರ್ಷ ಶೇ 4 ರಷ್ಟು ಹೆಚ್ಚುವರಿ ಪಿಂಚಣಿ ಸಿಗುತ್ತದೆ.
Comments are closed, but trackbacks and pingbacks are open.