Kadaba: ಪ್ರೀತಿಯ ಹೆಸರೇಳಿ ಯುವತಿಯ ಮೇಲೆ ನಿರಂತರ ಅತ್ಯಾಚಾರ !! ಪುತ್ತೂರು, ಕುಂಬ್ರದಲ್ಲಿ ಬಾಡಿಗೆ ರೂಂ ಮಾಡಿ ಬ್ಲಾಕ್ಮೇಲ್ – ಆರೋಪಿ ಬಂಧನ
Kadaba: ಪ್ರೀತಿಸುವ ನಾಟಕವಾಡಿ ಕಾಲೇಜೊಂದರಲ್ಲಿ ಓದುತ್ತಿದ್ದ ಅಪ್ರಾಪ್ತ ವಯಸ್ಕ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿರುವ ಘಟನೆಯೊಂದು ಕಡಬ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.
ಹೌದು, ದಕ್ಷಿಣ ಕನ್ನಡ ಜಿಲ್ಲೆಯ ಕಡಬ(Kadaba) ತಾಲೂಕು ಕೋಡಿಂಬಾಳ ಗ್ರಾಮದ ಓಂಕಲ್ ನಿವಾಸಿ ಪ್ರವೀಣ್ ಪೂಜಾರಿ ಮೇಲೆ ಈ ರೀತಿಯ ಆರೋಪ ಕೇಳಿ ಬಂದಿದ್ದು ಕಡಬ ಪೊಲೀಸರು ಬಂಧಿಸಿದ್ದಾರೆ. ಈತನು ಬಾಲಕಿ ಜತೆಗೆ ಸುತ್ತಾಟ ನಡೆಸಿ ವಿಶ್ವಾಸ ಗಳಿಸಿ ಬಳಿಕ ಬಾಡಿಗೆ ರೂಂಗೆ ಕರೆದೊಯ್ದು ದೈಹಿಕ ಸಂಪರ್ಕ ಬೆಳೆಸಿದ್ದಾನೆ.
ಈ ಕುರಿತು ಯುವತಿಯು ದೂರು ನೀಡಿದ್ದು ಅನೇಕ ಬಾರಿ ಆಕೆಯನ್ನು ಪುತ್ತೂರು ಬಳಿಯ ಬಾಡಿಗೆ ರೂಂಗೆ ಕರೆದೊಯ್ಡು ದೈಹಿಕವಾಗಿ ಬಳಸಿಕೊಂಡಿದ್ದ. ಆಕೆ ಗರ್ಭಿಣಿಯಾಗದಂತೆ ಮಾತ್ರೆಯನ್ನು ತಂದುಕೊಟ್ಟಿದ್ದಾನೆ. ಅದರ ಜತೆಗೆ ಖಾಸಗಿ ಕ್ಷಣದ ವೀಡಿಯೋಗಳನ್ನು ತನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡು ಬ್ಲ್ಯಾಕಕ್ಮೇಲ್ ಮಾಡುತ್ತಿದ್ದ ಎನ್ನಲಾಗಿದೆ. ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಲ್ಲದೆ ಸೋಮವಾರ ಕುಂಬ್ರದಲ್ಲಿರುವ ಬಾಡಿಗೆ ರೂಂಗೆ ಕರೆದೊಯ್ದು ಅಲ್ಲೇ ಉಳಿದುಕೊಂಡು ದೈಹಿಕ ಸಂಪರ್ಕ ಬೆಳೆಸಿದ್ದ. ಮರುದಿನ ರೂಂನಲ್ಲಿ ಇರುವಾಗಲೇ ಬಾಲಕಿ ಜತೆ ತಗಾದೆ ತೆಗೆದು ದೈಹಿಕ ಹಿಂಸೆ ನೀಡಿ ಜಗಳವಾಡಿದ್ದ. ಬಳಿಕ ಬೈಕಿನಲ್ಲಿ ಕರೆದೊಯ್ದು ಫರಂಗಿಪೇಟೆ ಬಳಿ ರಸ್ತೆ ಬದಿ ಬಿಟ್ಟು ಹೋಗಿದ್ದ. ಮನೆಯವರಿಗೆ ವಿಷಯ ತಿಳಿಸಿದ್ದ ಬಾಲಕಿಗೆ ಮನೆಮಂದಿ ಧೈರ್ಯ ತುಂಬಿ ಮನೆಗೆ ಕರೆದುಕೊಂಡು ಬಂದು ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಕಡಬ ಪೊಲೀಸರು ಸುಳ್ಯದಲ್ಲಿದ್ದ ಯುವಕನನ್ನು ಬಂಧಿಸಿ ಆತನ ವಿರುದ್ಧ ಪೋಕ್ಸೋ, ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Comments are closed, but trackbacks and pingbacks are open.