5,000 Rupee Note: ದೇಶದಲ್ಲಿ 5,000 ರೂ ನೋಟು ಚಲಾವಣೆ ವಿಚಾರ – ಮಹತ್ವದ ಮಾಹಿತಿ ಹಂಚಿಕೊಂಡ RBI
5000 Rupee Note: ಭಾರತದಲ್ಲಿ ಮೋದಿ ಸರ್ಕಾರ ಮಾಡಿದ ಮಹತ್ವದ ಬದಲಾವಣೆಗಳಲ್ಲಿ ನೋಟು ನೋಟು ಅಮಾನ್ಯೀಕರಣ ಕೂಡ ಒಂದು. ಇದರ ಬಳಿಕ ದೇಶದಲ್ಲಿ 2000 ರೂ ನೋಟುಗಳು ಚಲಾವಣೆಗೊಂಡು ಬಳಿಕ 500 ರೂಪಾಯಿಯ(5,000 Rupee Note) ಚಲಾವಣೆಗೆ ಬಂದವು. ತದನಂತರ 100ರೂ, 200ರೂ 50ರೂ, 20 ಹಾಗೂ ಹತ್ತು ರೂಪಾಯಿಯ ನೋಟುಗಳು ಹೊಸ ರೂಪ ಪಡೆದು ದೇಶಾದ್ಯಂತ ಚಲಾವಣೆಯಾಗುತ್ತಿವೆ. ಇವೆಲ್ಲವೂ ಆದ ಬಳಿಕ 2,000 ರೂ ನೋಟುಗಳನ್ನು ಸರ್ಕಾರ ಮರಳಿ ಹಿಂಪಡೆಯಿತು. ಇದೀಗ ಈ ಬೆನ್ನಲ್ಲೇ 5,000 ನೋಟುಗಳು ಚಲಾವಣೆಗೆ ಬರಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೀಗ ಈ ಕುರಿತು ಆರ್ ಬಿ ಐ ಸ್ಪಷ್ಟೀಕರಣ ನೀಡಿದೆ.
ಹೌದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಸುದ್ದಿಯಿಂದ ಜನರಲ್ಲಿ ಕುತೂಹಲ ಮೂಡಿದೆ. ಪ್ರಸ್ತುತ ಭಾರತದ ಅತಿದೊಡ್ಡ ನೋಟು 500 ರೂ. ಇದಲ್ಲದೇ ಭಾರತದಲ್ಲಿ 200, 100, 50, 50 ಮತ್ತು 10 ರೂಪಾಯಿ ನೋಟುಗಳು ಚಾಲ್ತಿಯಲ್ಲಿವೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ಸುದ್ದಿಯಿಂದಾಗಿ ವ್ಯಾಪಾರಸ್ಥರು ಮತ್ತು ದೊಡ್ಡ ವಹಿವಾಟು ನಡೆಸುವವರಲ್ಲಿ ಚರ್ಚೆ ಆರಂಭವಾಗಿದೆ.
ಆರ್‌ಬಿಐ ಗವರ್ನರ್ ಅವರು 5,000 ರೂ ನೋಟುಗಳನ್ನು ಬಿಡುಗಡೆ ಮಾಡುವ ಯಾವುದೇ ಯೋಜನೆ ಇಲ್ಲ ಎಂದು ಹೇಳಿದ್ದಾರೆ. ದೊಡ್ಡ ಮುಖಬೆಲೆಯ ಹೊಸ ನೋಟುಗಳನ್ನು ಚಲಾವಣೆಗೆ ತರಲು ಆರ್‌ಬಿಐ ಮನಸ್ಸು ಮಾಡುತ್ತಿಲ್ಲ. ದೇಶದ ಆರ್ಥಿಕ ಅಗತ್ಯಗಳಿಗೆ ಪ್ರಸ್ತುತ ದೇಶದ ಕರೆನ್ಸಿ ವ್ಯವಸ್ಥೆಯು ಸಾಕಾಗುತ್ತದೆ ಎಂದು ಆರ್‌ಬಿಐ ಹೇಳಿದೆ. ಪ್ರಮುಖ ಬದಲಾವಣೆಗಳ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ಅಲ್ಲದೆ ಪ್ರಸ್ತುತ, ಸರ್ಕಾರವು ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುತ್ತಿದೆ. UPI, ಇಂಟರ್ನೆಟ್ ಬ್ಯಾಂಕಿಂಗ್ ಮತ್ತು ಡಿಜಿಟಲ್ ವ್ಯಾಲೆಟ್‌ಗಳಿಗೆ ಹೆಚ್ಚಿನ ಮಹತ್ವವನ್ನು ನೀಡುತ್ತಿದೆ. ಆರ್‌ಬಿಐ ಕೇವಲ 2000 ರೂಪಾಯಿ ನೋಟುಗಳನ್ನು ಹಿಂಪಡೆಯಲು ನಿರ್ಧರಿಸಿದೆ. ಹಾಗಾಗಿ ಹೊಸ 5000 ರೂ. ನೋಟುಗಳನ್ನು ಪರಿಚಯಿಸುವ ಯೋಜನೆ ಇಲ್ಲ ತಿಳಿಸಿದ್ದಾರೆ.