Actor Darshan: ದರ್ಶನ್‌, ಪವಿತ್ರಾ ಗೌಡಗೆ ಹೊಸ ವರ್ಷಕ್ಕೆ ಕಾದಿದ್ಯ ಸಂಕಷ್ಟ? ಗೃಹ ಇಲಾಖೆಯಿಂದ ಮಹತ್ವದ ನಿರ್ಧಾರ

Share the Article

Actor Darshan: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್‌ ಪೂರ್ಣ ಪ್ರಮಾಣದ ಜಾಮೀನು ಪಡೆದು ಕೋರ್ಟ್‌ನಿಂದ ಹೊರ ಬಂದಿದ್ದಾರೆ. ಇವರ ಜೊತೆ ಪವಿತ್ರಾ ಗೌಡ ಸೇರಿ ಅನೇಕರು ಜಾಮೀನು ದೊರಕಿದೆ. ಇದೂಗ ಬೆಂಗಳೂರು ಪೊಲೀಸರು ದರ್ಶನ್‌ ಜಾಮೀನು ರದ್ದು ಕೋರಿ ಸುಪ್ರೀಂಕೋರ್ಟ್‌ ಮೊರೆ ಹೋಗಲು ತಯಾರಿ ಮಾಡಿದ್ದಾರೆ. ಇದಕ್ಕೆ ಗೃಹಇಲಾಖೆ ಗ್ರೀನ್‌ ಸಿಗ್ನಲ್‌ ನೀಡಿದೆ.

ಸರ್ಜರಿಯ ಕಾರಣ ಮಧ್ಯಂತರ ಜಾಮೀನು ಪಡೆದಿದ್ದ ದರ್ಶನ್‌ ನಂತರ ಪೂರ್ಣ ಪ್ರಮಾಣದ ಜಾಮೀನು ಪಡೆದಿದ್ದಾರೆ. ಕೂಡಲೇ ಆಸ್ಪತ್ರೆಯಲ್ಲಿದ್ದ ದರ್ಶನ್‌ ಅಲ್ಲಿಂದ ಡಿಸ್ಚಾರ್ಜ್‌ ಆಗಿದ್ದಾರೆ. ಪೊಲೀಸರು ಶೀಘ್ರದಲ್ಲೇ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಿದ್ದಾರೆ. ಮೆರಿಟ್ಸ್‌ ಆಫ್‌ ದಿ ಕೇಸ್‌ ಮೇಲೆ ಮನವಿ ಮಾಡಲು ಪೊಲೀಸರು ತಯಾರಿಯಲ್ಲಿದ್ದಾರೆ. ಇಲ್ಲಿ ಕೇವಲ ದರ್ಶನ್‌ದು ಮಾತ್ರವಲ್ಲದೇ, ಬೇಲ್‌ ಪಡೆದ ಎಲ್ಲರ ಜಾಮೀನು ರದ್ದು ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಬೆಂಗಳೂರು ಪೊಲೀಸರು ದರ್ಶನ್, ಪವಿತ್ರಾ ಗೌಡ, ಲಕ್ಷ್ಮಣ, ಪ್ರದೋಶ್, ನಾಗರಾಜು, ಅನುಕುಮಾರ್, ಜಗದೀಶ್​ಗೆ ಹೈಕೋರ್ಟ್​ ಜಾಮೀನು ನೀಡಿರುವ ಕುರಿತು ಪ್ರಶ್ನೆ ಮಾಡಲಿದ್ದಾರೆ.

Leave A Reply