Bigg Boss: ವೇದಿಕೆಯಲ್ಲೇ ಚೈತ್ರ – ರಜತ್ ಗೆ ಬೆಲೆಬಾಳುವ ತನ್ನ ಕಿವಿಯೋಲೆ ಬಿಚ್ಚಿ ಉಡುಗೊರೆ ಕೊಟ್ಟ ಕಿಚ್ಚ! ಯಾಕಾಗಿ?
Bigg Boss: ‘ಬಿಗ್ ಬಾಸ್ ಕನ್ನಡ ಸೀಸನ್ 11’ ಕಾರ್ಯಕ್ರಮದಲ್ಲಿ ಭಾನುವಾರದ (ಡಿಸೆಂಬರ್ 29) ಎಪಿಸೋಡ್ ಚೈತ್ರಾ ಕುಂದಾಪುರ ಅವರ ಪಾಲಿಗೆ ಎಮೋಷನಲ್ ಆಗಿತ್ತು. ಯಾಕೆಂದರೆ ಕೆಲವು ಎಪಿಸೋಡ್ಗಳ ಹಿಂದೆ ಕಿಚ್ಚ ಸುದೀಪ್ ಅವರು ಚೈತ್ರಾ ಕುಂದಾಪುರಗೆ ಸಿಕ್ಕಾಪಟ್ಟೆ ಕ್ಲಾಸ್ ತೆಗೆದುಕೊಂಡಿದ್ದರು. ಆದರೆ ಈಗ ಅವರಿಗೆ ಭರಪೂರ ಪ್ರೀತಿ ಸಿಕ್ಕಿದೆ. ಬಿಗ್ ಬಾಸ್ ವೇದಿಕೆಯಲ್ಲೇ ಸುದೀಪ್ ಅವರು ಒಂದು ಉಡುಗೊರೆ ನೀಡಿದ್ದಾರೆ.
ಯಸ್, ಅಷ್ಟಕ್ಕೂ ಕಿಚ್ಚ ಸುದೀಪ್(Kiccha Sudeep ) ನೀಡಿದ್ದು ಏನು ಎಂದು ಯೋಚಿಸ್ತಿದ್ದೀರಾ? ತಾವೇ ಧರಿಸಿದ್ದ ಕಿವಿಯ ರಿಂಗ್..! ರಜತ್ ಅವರಿಗೂ ಇದೇ ಉಡುಗೊರೆ ನೀಡಲಾಗಿದೆ. ಹೊಸ ವರ್ಷದ ಪ್ರಯುಕ್ತ ಚೈತ್ರಾ ಅವರಿಗೆ ಈ ಗಿಫ್ಟ್ ನೀಡಲಾಗಿದ್ದು ಇಂಥ ಉಡುಗೊರೆ ಸಿಕ್ಕಿದ್ದಕ್ಕೆ ಚೈತ್ರಾ ಕುಂದಾಪುರ ಅವರು ಎಮೋಷನಲ್ ಆಗಿದ್ದಾರೆ.
ಸುದೀಪ್ ರಿಂಗ್ ಕೊಟ್ಟಿದ್ಯಾಕೆ?
2024ರ ವರ್ಷ ಮುಗಿಯುತ್ತಿದೆ. 2025ರ ವರ್ಷದ ಆಗಮನಕ್ಕೆ ಕ್ಷಣಗಣನೆ ಶುರುವಾಗಿದೆ. 2024ರ ಕೊನೆಯ ವೀಕೆಂಡ್ ಸಂಚಿಕೆಯನ್ನು ಕಿಚ್ಚ ಸುದೀಪ್ ಅವರು ಡಿ.29ರಂದು ನಡೆಸಿಕೊಟ್ಟರು. ಹೊಸ ವರ್ಷಕ್ಕಾಗಿ ದೊಡ್ಮನೆಯ ಸ್ಪರ್ಧಿಗಳು ಒಬ್ಬರಿಗೊಬ್ಬರು ಗಿಫ್ಟ್ ಕೊಟ್ಟುಕೊಳ್ಳುವಂತೆ ಸುದೀಪ್ ಹೇಳಿದರು.
ಅಂತೆಯೇ ಚೈತ್ರಾ ಅವರು, ಐಶ್ವರ್ಯಾಗೆ ಸೀರೆಯ ಪಿನ್ ಕೊಟ್ಟರು. ಮತ್ತು ತಾಯಿ ಇಲ್ಲದ ಹೆಣ್ಣು ಮಗು ಹೇಗಿರಬಹುದು ಎಂದು ನಾನು ಯೋಚಿಸುತ್ತೇನೆ. ನಾನು ನನ್ನ ತಾಯಿಗಾಗಿ ಶೋಗೆ ಬಂದೆ. ಆದರೆ ತಾಯಿಯನ್ನು ಕಳೆದುಕೊಂಡ ಆಕೆ ಇರ್ತಾಳೆ ಅಂತ ಭಾವುಕರಾದರು. ಇದು ಮನೆಯಲ್ಲಿ ಭಾವುಕ ಸನ್ನಿವೇಶ ಸೃಷ್ಟಿಸಿತು. ಅದಾದ ಬಳಿಕ ಎಲ್ಲರ ನಿರೀಕ್ಷೆಯಂತೆ ಭವ್ಯಾ ಗೌಡ, ತಮ್ಮ ಆತ್ಮೀಯ ಗೆಳೆಯ ತ್ರಿವಿಕ್ರಮ್ ಗೆ ಟೀ ಶರ್ಟ್ ಅನ್ನು ಉಡುಗೊರೆಯಾಗಿ ನೀಡಿದರು. ಆ ನಂತರ ತ್ರಿವಿಕ್ರಮ ಅವರ ಗುಣವನ್ನು ಹೊಗಳಿ ಕೊಂಡಾಡಿದರು. ಇದನ್ನು ಕೇಳಿ ಸುದೀಪ್ ಜೋಕ್ ಮಾಡಿದರು. ಅದು ಮನೆಯಲ್ಲಿ ನಗುವಿನ ಅಲೆ ಎಬ್ಬಿಸಿತು. ತ್ರಿವಿಕ್ರಮ್ ಭವ್ಯಾಗೆ ಶರ್ಟ್ ಗಿಫ್ಟ್ ಮಾಡಿದರು.
ಧನ್‌ರಾಜ್ ತನ್ನ ಆತ್ಮೀಯ ಗೆಳೆಯ ಹನುಮಂತಗೆ ಚಿನ್ನವನ್ನು ಗಿಫ್ಟ್ ಮಾಡಿದರು. ಹನುಮಂತು ಧನುಗೆ ಒಂದಂಗಿ ಒಂದು ಲುಂಗಿ ಗಿಫ್ಟ್ ಮಾಡಿದರು. ಐಶ್ವರ್ಯಾ ತಮ್ಮ ಜಾಕೆಟ್ ಅನ್ನು ಮೋಕ್ಷಿತಾಗೆ ಗಿಫ್ಟ್ ಮಾಡಿದರು. ರಜತ್ ತನ್ನ ಫೇವರಿಟ್ ಜಾಕೆಟ್ ಅನ್ನು ಧನ್‌ರಾಜ್ ಗೆ ನೀಡಿದರು. ಗೌತಮಿ ಮತ್ತು ಮಂಜು ಇಬ್ಬರು ಗಿಫ್ಟ್ ವಿನಿಮಯ ಮಾಡಿಕೊಂಡರು.
ಸ್ಪರ್ಧಿಗಳಿಂದ ಎಲ್ಲರಿಗೂ ಗಿಫ್ಟ್ ಸಿಕ್ಕಿತು. ಆದರೆ ರಜತ್ ಮತ್ತು ಚೈತ್ರಾ ಕುಂದಾಪುರ ಅವರಿಗೆ ಯಾರೂ ಗಿಫ್ಟ್ ಕೊಡಲಿಲ್ಲ. ಹಾಗಾಗಿ ಸುದೀಪ್ ಅವರು ತಾವೇ ಗಿಫ್ಟ್ ನೀಡುವುದಾಗಿ ತಿಳಿಸಿದರು. ಅದಕ್ಕೆ ಕಿಚ್ಚ ಕೂಡಲೇ ತನ್ನ ಎರಡೂ ಕಿವಿಯಲ್ಲಿದ್ದ ಬೆಲೆಬಾಳುವ ಕಿವಿಯೋಲೆಯನ್ನು ಇಬ್ಬರಿಗೂ ಒಂದೊಂದು ಗಿಫ್ಟ್ ಮಾಡಿದರು. ಕೂಡಲೇ ತನ್ನ ಕಿವಿಯಿಂದ ಬಿಚ್ಚಿ ಕಳುಹಿಸಿಕೊಟ್ಟರು. ಈ ಮೂಲಕ ನಿಮ್ಮಿಬ್ಬರನ್ನು ಒಂದಾಗಿಸಿದ್ದೇನೆ ಎಂದು ಸುದೀಪ್ ಹೇಳಿದರು