Athiya Shetty Flaunt Baby Bump: ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡ ಆಥಿಯಾ ಶೆಟ್ಟಿ, ಅನುಷ್ಕಾ ಶರ್ಮ; ಬೇಬಿ ಬಂಪ್‌ ವೀಡಿಯೋ ವೈರಲ್‌

Share the Article

Athiya Shetty Flaunt Baby Bump: ಬಾಲಿವುಡ್ ನಟಿ ಆಥಿಯಾ ಶೆಟ್ಟಿ ಶೀಘ್ರದಲ್ಲೇ ತಾಯಿಯಾಗಲಿದ್ದಾರೆ. ಕೆಲವು ಸಮಯದ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಹಂಚಿಕೊಳ್ಳುವ ಮೂಲಕ ಅವರು ತಮ್ಮ ಗರ್ಭಧಾರಣೆಯ ಬಗ್ಗೆ ತಿಳಿಸಿದ್ದರು. ಇದೀಗ ಅಥಿಯಾ ಮತ್ತು ಕೆಎಲ್ ರಾಹುಲ್ ಮಗುವಿನ ಆಗಮನಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಅಥಿಯಾ ಅವರ ವೀಡಿಯೊ ವೈರಲ್ ಆಗುತ್ತಿದೆ. ಇದರಲ್ಲಿ ಅವರು ತಮ್ಮ ಮಗುವಿನ ಬಂಪ್ ಅನ್ನು ತೋರಿಸುವ ವೀಡಿಯೋವೊಂದು ವೈರಲ್‌ ಆಗಿದೆ. ಅಥಿಯಾ ಜೊತೆ ಅನುಷ್ಕಾ ಶರ್ಮಾ ಕೂಡ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರನ್ನೂ ಒಟ್ಟಿಗೆ ನೋಡಿದ ಅಭಿಮಾನಿಗಳು ಅಥಿಯಾ ಮತ್ತು ಅನುಷ್ಕಾ ಹೊಸ ಬಿಎಫ್‌ಎಫ್‌ಗಳಾಗಿದ್ದಾರೆ ಎಂದು ಹೇಳುತ್ತಿದ್ದಾರೆ.

ಅಥಿಯಾ ಮತ್ತು ಅನುಷ್ಕಾ ಇಬ್ಬರೂ ಪ್ರಸ್ತುತ ಆಸ್ಟ್ರೇಲಿಯಾದಲ್ಲಿದ್ದಾರೆ. ಇಬ್ಬರೂ ತಮ್ಮ ಪತಿ ಕೆಎಲ್ ರಾಹುಲ್ ಮತ್ತು ವಿರಾಟ್ ಕೊಹ್ಲಿಯನ್ನು ಹುರಿದುಂಬಿಸಲು ಹೋಗಿದ್ದಾರೆ. ಅಲ್ಲಿ ಇಬ್ಬರೂ ಒಟ್ಟಿಗೆ ತಿರುಗಾಡುತ್ತಿರುವುದು ಕಂಡು ಬಂತು.

ಅಥಿಯಾ-ಅನುಷ್ಕಾ ಅವರ ವಿಡಿಯೋ ವೈರಲ್ ಆಗಿದೆ
ವೈರಲ್ ವೀಡಿಯೊದಲ್ಲಿ, ಅನುಷ್ಕಾ ಮತ್ತು ಅಥಿಯಾ ರೆಸ್ಟೋರೆಂಟ್‌ಗೆ ಪ್ರವೇಶಿಸುತ್ತಿರುವುದನ್ನು ಕಾಣಬಹುದು. ಅನುಷ್ಕಾ ಬಿಳಿ ಶರ್ಟ್ ಜೊತೆಗೆ ಬೂದು ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ಹಿಂದೆ ಅಥಿಯಾ ಕಾಣಿಸಿಕೊಂಡಿದ್ದಾರೆ. ಡೆನಿಮ್ ಜೀನ್ಸ್ ಮತ್ತು ಸ್ಟ್ರೈಪ್ಡ್ ಟಾಪ್ ಅನ್ನು ಧರಿಸಿದ್ದಾರೆ. ಇದರಲ್ಲಿ ಅಥಿಯಾ ಹೊಟ್ಟೆ ಕಡೆ ಗಮನ ಎಲ್ಲರದು ಹೆಚ್ಚಿದೆ.

 

Leave A Reply