BBK11: ಬಿಗ್‌ಬಾಸ್ ಮನೆಯಿಂದ ಹೊರಬಂದಿರುವ ಸ್ಪರ್ಧಿ ಇವರೇ ನೋಡಿ
BBK11: ಬಿಗ್‌ಬಾಸ್ ಕನ್ನಡ ಸೀಸನ್ 11 13ನೇ ವಾರಕ್ಕೆ ಕಾಲಿಟ್ಟಿದೆ. ಇದೀಗ ದೊಡ್ಮನೆಯಿಂದ ಒಬ್ಬರು ಆಚೆ ಬಂದಿದ್ದಾರೆ. ಈ ಮೂಲಕ ಬಿಗ್‌ಬಾಸ್ ಆಟದಿಂದ ಈ ವಾರ ಐಶ್ವರ್ಯ ಅವರು ಮನೆಯಿಂದ ಹೊರ ಬಂದಿದ್ದಾರೆ ಎನ್ನಲಾಗಿದೆ.
ಕಿಚ್ಚ ಸುದೀಪ್ ಅವರ ನಿನ್ನೆಯ ಎಪಿಸೋಡ್‌ನಲ್ಲಿ ಬಿಗ್‌ಬಾಸ್ ರೆಸಾರ್ಟ್ ಟಾಸ್ಕ್, ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಆಗಿದ್ದ ಕೆಲವೊಂದು ಗೊಂದಲಗಳ ಕುರಿತು ನಿನ್ನೆ ಸಖತ್ ಆಗಿ ಕ್ಲಾಸ್ ತೆಗೆದುಕೊಂಡಿದ್ದರು. ಹಾಗೆನೇ ಈ ವಾರ ರಜತ್, ಭವ್ಯ ಅವರನ್ನು ಬಿಟ್ಟು ಮನೆಯ ಎಲ್ಲಾ ಸ್ಪರ್ಧಿಗಳು ನಾಮಿನೇಟ್ ಆಗಿದ್ದು, ನಿನ್ನೆ ಧನರಾಜ್, ಹನುಮಂತು ಅವರನ್ನು ನಿನ್ನೆ ಸುದೀಪ್ ಸೇವ್ ಮಾಡಿದ್ದಾರೆ.
ಮೂಲಗಳ ಪ್ರಕಾರ, ಇವತ್ತು ಬಾಟಂ ಟೂ ನಲ್ಲಿ ಐಶ್ವರ್ಯಾ ಹಾಗೂ ಮೋಕ್ಷಿತಾ ಇದ್ದಾರೆ. ಈ ಪೈಕಿ ಐಶ್ವರ್ಯಾ ಅವರು ಎಲಿಮಿನೇಟ್ ಆಗಿದ್ದಾರೆ ಎನ್ನಲಾಗಿದೆ. ಶಿಶಿರ್ ಅವರು ಮನೆಯಿಂದ ಹೊರ ಹೋದಮೇಲೆ ತಮ್ಮದೇ ಆಟವನ್ನು ಆಡುತ್ತಿದ್ದ ಐಶ್ವರ್ಯ ಇದೀಗ ಮನೆಯಿಂದ ವೀಕ್ಷಕರ ವೋಟ್ ಪ್ರಕಾರ ಮನೆಯಿಂದ ಹೊರ ಬಂದಿದ್ದಾರೆ ಎನ್ನಲಾಗಿದೆ.